ಸೂಪರ್ ಸ್ಟಾರ್ ರ್ಸೂರ್ಯ ಹೊಸ ಚಿತ್ರ ಅಂಜಾನ್

ಶುಕ್ರವಾರ, 17 ಜನವರಿ 2014 (11:36 IST)
PR
ಯಮುಡು, ಸಿಂಘಂ,ಗಜನಿ ಯಂತಹ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡಿದ ನಟ ಸೂರ್ಯ, ಈತ ತನ್ನ ಚಿತ್ರದ ಯಶಸ್ಸಿಗಾಗಿ ಶ್ರಮವಹಿಸುವುದರಲ್ಲಿ ಎಂದಿಗೂ ಮೈಗಳ್ಳತನ ಮಾಡುವುದಿಲ್ಲ. ಆದ್ದರಿಂದಲೇ ಅವರು ನಟಿಸಿದ ಚಿತ್ರಗಳು ಯಶಸ್ಸು ತನ್ನದಾಗಿಸಿಕೊಳ್ಳುತ್ತದೆ . ಈಗ ತಮಿಳು ಮತ್ತು ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದನ್ನು ತಮಿಳಿನ ಪ್ರಸಿದ್ಧ ನಿರ್ದೇಶಕ ಲಿಂಗು ಸ್ವಾಮಿ ನಿರ್ದೇಶಿಸಿ-ನಿರ್ಮಿಸುತ್ತಿದ್ದಾರೆ. ಈ ಚಿತ್ರವೂ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.

ಇಷ್ಟು ದಿನಗಳ ಕಾಲ ಚಿತ್ರದ ಬಗ್ಗೆ ಮಾಹಿತಿ ನಾವು ಬರೆಯುತ್ತಿದ್ದರು , ಅದು ಯಾವ ಹೆಸರನನ್ನು ಹೊಂದಿದೆ ಎನ್ನುವ ಬಗ್ಗೆ ತಿಳಿಸಿರಲಿಲ್ಲ, ಅದಕ್ಕೆ ಕಾರಣ ಅದರ ಟೈಟಲ್ ನಿರ್ಧಾರ ಆಗಿರಲಿಲ್ಲ. ಈಗ ಬಂದಿರುವ ಸುದ್ದಿಯ ಪ್ರಕಾರ ಈ ಚಿತ್ರದ ಹೆಸರು ಅಂಜಾನ್ ಎಂದು ನಿರ್ಧರಿತವಾಗಿದೆ. ಈ ಚಿತ್ರದಲ್ಲಿ ಸಮಂತ ಹೀರೊಯಿನ್ ಆಗಿದ್ದಾರೆ. ಸಾಮಾನ್ಯವಾಗಿ ಉತ್ತಮ ಮಾಸ್ ಚಿತ್ರಗಳನ್ನು ನೀಡುವ ಲಿಂಗು ಸ್ವಾಮಿ ಅಂಜಾನ್ ಸಹ ಉತ್ತಮ ರೀತಿಯಲ್ಲಿ ಅದರಲ್ಲೂ ತುಂಬಾ ಸ್ಟೈಲಿಶ್ ಆಗಿ ನಿರಮಿಸುತ್ತಿದ್ದಾರಂತೆ. ಅದ್ಯಾವ ಬಗೆಯಲ್ಲಿ ಸ್ಟೈಲಿಶ್ ಎಂಬುರದ ಬಗ್ಗೆ ಹೇಳಲಾಗದು ! ಆದರೆ ಈ ಚಿತ್ರದಲ್ಲಿ ಸೂರ್ಯ ತುಂಬಾ ಫ್ರೆಶ್ ಆಗಿ ಕಾಣುತ್ತಿದ್ದಾರಂತೆ .

ಆರಂಭದಲ್ಲಿ ಈ ಚಿತ್ರ ತಮಿಳಿನಲ್ಲಿ ಮಾತ್ರ ಬಿಡುಗಡೆ ಆಗುವುದಾಗಿ ನಿರ್ಧರಿತವಾಗಿತ್ತು. ಆದರೆ ತಮಿಳಿನಂತೆ ತೆಲುಗು ಚಿತ್ರರಂಗದಲ್ಲೂ ಸಹ ಸೂರ್ಯಾಗೆ ಒಳ್ಳೆಯ ಮಾರ್ಕೆಟ್ ಇರುವುದರಿಂದ ಆ ಭಾಷೆಯಲ್ಲೂ ಅಂಜಾನ್ ನಿರ್ಮಿಸುವ ಬಗ್ಗೆ ನಿರ್ಧಾರ ಮಾಡಿದರಂತೆ ನಿರ್ಮಾಪಕರು. ಈ ಮೂಲಕ ಡಬ್ಬಿಂಗ್ ಇಲ್ಲದೆ ಅಂಜಾನ್ ಸಿನಿಮಾ ನೋಡ ಬಹುದು ಅಂತಿದ್ದಾರೆ ಅಲ್ಲಿನವರು!

ವೆಬ್ದುನಿಯಾವನ್ನು ಓದಿ