ಸೂರ್ಯ ಸಿನಿಮಾದಲ್ಲಿ ಸೋನಾಕ್ಷಿ ಐಟಂ.. ಇದು ಲಿಂಗು ಸ್ವಾಮಿ ಕಮಾಲ್!
ಶನಿವಾರ, 11 ಜನವರಿ 2014 (09:23 IST)
PR
ತಮಿಳು ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ಲಿಂಗು ಸ್ವಾಮಿ. ಅವರು ಸೋನಾಕ್ಷಿಯನ್ನು ಕರೆತಂದಿದ್ದಾರೆ ದಕ್ಷಿಣ ಭಾರತಕ್ಕೆ . ಸೂರ್ಯ ಹೊಸದನ್ನು ನೀಡಲು ಸದಾ ಹಾತೊರೆಯುವಂತಹ ಕಲಾವಿದ. ಆಟ ನಟಿಸಿದ ಚಿತ್ರಗಳು ಅಪಾರ ಸಂಖ್ಯೆಯ ಪ್ರೇಕ್ಷಕರ ಮನ ಗೆದ್ದಿದೆ. ಈಗ ಲಿಂಗು ಸ್ವಾಮಿ ಅವರ ನಿರ್ದೇಶನದ ಚಿತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಅವರ ಹೊಸ ಚಿತ್ರದಲ್ಲಿ ಸೂರ್ಯ ಅವರ ಜೊತೆ ದಬಾಂಗ್ ಸುಂದರಿ ಸೋನಾಕ್ಷಿ ಸಿಂಹ ಐಟಂ ನಂಬರ್ ನಲ್ಲಿ ಕಾಣಿಸಿ ಕೊಳ್ಳುತ್ತಿದ್ದಾಳೆ. ಇದನ್ನು ಮಾಧ್ಯಮಗಳಿಗೆ ಚಿತ್ರ ನಿರ್ಮಾಪಕ/ ನಿರ್ದೇಶಕ ಲಿಂಗು ಸ್ವಾಮಿ ಹೇಳಿದ್ದಾರೆ.
ಬಾಲಿವುಡ್ ನ ಸಕ್ಸಸ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ಸೋನ್ನಾಕ್ಷಿ ದಕ್ಷಿಣ ಭಾರತ ಸಿನಿಮಾದಲ್ಲಿ ಐಟಂ ನಂಬರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದರೆ ಸೂರ್ಯ ಪ್ರಭಾವ ಹೇಗಿರ ಬಹುದು ಎನ್ನುವುದನ್ನು ನೀವೆ ಯೋಚಿಸಿ. ಮುಖ್ಯವಾಗಿ ಲಿಂಗು ಸ್ವಾಮಿ ಸಹ ಸೋನಾಕ್ಷಿ ಬಳಿ ಐಟಂ ಸಾಂಗ್ ಮಾಡಿಸುತ್ತಿದ್ದಾರೆ ಅಂದರೆ ಚಿತ್ರ ವಿಶೇಷತೆ ಬಗ್ಗೆ ಹಲವಾರು ಕುತೂಹಲಗಳು ಎದ್ದಿವೆ.
ಒಂದು ಸಿನಿಮಾ ಯಶಸ್ಸಿಗೆ ಏನು ಬೇಕೋ ಅದನ್ನು ಮಾಡಲು ಲಿಂಗು ಸ್ವಾಮಿ ಸದಾ ಸಿದ್ಧ. ಅದರ ಭಾಗವಾಗಿದೆ ಈ ಸಂಗತಿ. ಇ ಚಿತ್ರಕ್ಕೆ ಯುವನ್ ಶಂಕರ್ ರಾಜ ಸಂಗೀತ ನೀಡಿದ್ದಾರೆ. ಸಮಂತ ಇದರ ಹೀರೋಯಿನ್ .