ಸೋನಂಗೆ ಮತ್ತೊಮ್ಮೆ ಒಲಿದ ಅದೃಷ್ಟ

ಸೋಮವಾರ, 10 ಡಿಸೆಂಬರ್ 2007 (12:36 IST)
ತನ್ನ ಚೊಚ್ಚಲ ಚಿತ್ರ ಸಾವರಿಯಾ ಬಾಕ್ಸ್‌ಆಫೀಸ್‌ನಲ್ಲಿ ಕುಸಿದುಬಿದ್ದರೂ, ಅದೃಷ್ಟವು ಇನ್ನೂ ಸೋನಂ ಕಪೂರ್ ಪರವಾಗಿದೆ. ಓಂಪ್ರಕಾಶ್ ಮೆಹ್ರಾ ಅವರ 'ಡೆಲ್ಲಿ 6' ನಲ್ಲಿ ನಟಿಸುವ ಅವಕಾಶ ಅವರ ಪಾಲಾಗಿದೆ.

ನಾನು ಎರಡನೇ ಬಾರಿ ಅದೃಷ್ಟವಂತೆ. ಸಂಜಯ್ ಲೀಲಾ ಬನ್ಸಾಲಿಯವರ ನಂತರ ನಾನು ಚಿತ್ರನಿರ್ಮಾಪಕರನ್ನು ಆಯ್ಕೆ ಮಾಡಬೇಕಿರುತ್ತಿದ್ದರೆ, ನಾನು ರಾಕೇಶ್ ಮೆಹ್ರಾ ಅವರನ್ನು ಆರಿಸುತ್ತಿದ್ದೆ. ಅವರ ಅಕ್ಸ್ ಸಿನಿಮಾವನ್ನು ನಾನಿನ್ನೂ ನೋಡಿಲ್ಲ ಆದರೆ ರಂಗ್ ದೇ ಬಸಂತಿ ಚಿತ್ರವು ನನಗೆ ಅತ್ಯಂತ ಪ್ರಿಯವಾಗಿದೆ. ಸಾವರಿಯಾದಂತೆ ಡೆಲ್ಲಿ6 ಚಿತ್ರದಲ್ಲೂ ಉತ್ತಮ ನಿರ್ವಹಣೆ ತೋರುವ ಭರವಸೆಯನ್ನು ಹೊಂದಿದ್ದೇನೆ ಎಂದು ಸೋನಂ ಪತ್ರಕರ್ತರೊಂದಿಗೆ ಹೇಳಿದ್ದಾರೆ.

ಅನೇಕ ಅವಕಾಶಗಳು ನನ್ನ ತಂದೆಯ ಬಳಿಗೆ ಬರುತ್ತಿವೆ. ಅವರು ನನ್ನ ಬಗ್ಗೆ ಹೆಮ್ಮೆ ಪಡುತ್ತಾರೆ. ನಾನು ಅರ್ಹ ನಟಿಯಾಗಿ ಗೌರವ ಮತ್ತು ಘನತೆಯೊಂದಿಗೆ ಮಾಧ್ಯಮವನ್ನು ನಿರ್ವಹಿಸಬಲ್ಲೆ ಎಂದು ಅವರು ಎಣಿಸಿರಲಿಲ್ಲ ಎಂದು ಸೋನಂ ಇತರ ಅವಕಾಶಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು.

ಬರುತ್ತಿರುವ ಎಲ್ಲಾ ಅವಕಾಶಗಳನ್ನು ಸೋನಂ ತಂದೆಯು ಪರಿಶೀಲಿಸುತ್ತಿದ್ದರೆ, ಸೋನಂ ಡೆಲ್ಲಿ6 ಸಿನಿಮಾದತ್ತ ಸಂಪೂರ್ಣವಾಗಿ ಕೇಂದ್ರೀಕತಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ