ಹಾಟಿನಿ ಅನುಷ್ಕಾಗೆ ಫ್ಯೂಚರ್ ನಲ್ಲಿ ಒಳ್ಳೆ ಚಾನ್ಸ್

ಸೋಮವಾರ, 4 ನವೆಂಬರ್ 2013 (11:42 IST)
PR
ಬಾಲಿವುಡ್ ಚೆಲುವೆ ಅನುಷ್ಕ ಶರ್ಮಳದ್ದೆ ಈಗ ಬಿಟೌನ್ ನಲ್ಲಿ ಸುದ್ದಿ. ಈ ಸುಂದರಿ ಶಾರುಖ್ ಖಾನ್ ಚಿತ್ರದಿಂದ ಬಣ್ಣದಲೋಕದ ಪಯಣ ಆರಂಭಿಸಿದಳು. ಒಂದೇ ಬ್ಯಾನರ್ ಆಕೆಗೆ ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿಸಿ ಕೊಟ್ಟಿತು. ಮೊದಲ ಚಿತ್ರದಲ್ಲಿ ಹೇಳಿಕೊಳ್ಳುವ ಪಾತ್ರ ಇಲ್ಲದೆ ಇದ್ರೂ ಎರಡನೇ ಚಿತ್ರದಲ್ಲಿ ಹಾಟ್ ಕಿಸ್ಸಿಂಗ್ ಸನ್ನಿವೇಶದಲ್ಲಿ ನಟಿಸುವ ಸೌಭಾಗ್ಯ. ಹೀಗೆ ಸಿನಿ ಲೈಫ್ ಆರಂಭಿಸಿದ ಅನುಷ್ಕ ಈಗ ಹಾಟಿನಿಗಳಲ್ಲಿ ಒಬ್ಬಳು . ಕೇವಲ ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ ಆಕೆ ತನ್ನ ರಿಯಲ್ ಲೈಫ್ ನಲ್ಲೂ ಸಹ ಸುದ್ದಿ ಮಾಡಿದ್ದು ಬಾಯ್ ಫ್ರೆಂಡ್ ಗಳಿಂದ !

ಈಗ ಮತ್ತೆ ಆಕೆ ಎಲ್ಲರ ಗಮನ ತನ್ನ ಕಡೆ ಸೆಳೆದಿದ್ದಾಳೆ. ಕಾರಣ ಸಿನಿಮಾ ನಿರ್ಮಾಣ ಮಾಡುವ ಮುಖಾಂತರ. ಅಯ್ಯೋ ಹೌದು ಕಣ್ರೀ ಆಕೆ ಈಗ ಸಿನಿಮಾ ಪ್ರೊಡಕ್ಷನ್ ನಲ್ಲೂ ಮಗ್ನ ಇನ್ನು ಇಪ್ಪತ್ತೈದರ ಹರೆಯದ ಈ ಹೆಣ್ಣು ಆಗಲೇ ಇಷ್ಟೆಲ್ಲಾ ಸಾಧನೆ ಮಾಡಿದ್ದಾಳೆ ಅಂದ್ರೆ ಆಕೆಯ ವಿಶೇಷತೆ ಸುಮ್ಮನೆ ಅಲ್ಲ ಅಲ್ವೇ! ಈಗ ಆಕೆ ನಿರ್ಮಾಣ ಕಾರ್ಯದಲ್ಲಿ ಸಾಥ್ ನೀಡಿರುವ ಚಿತ್ರ 'NH 10' ಬಾಲಿವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾ ಜೊತೆ ಈಕೆ ಕೈ ಜೋಡಿಸಿದ್ದಾಳೆ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಈಕೆ ಪ್ರಮುಖ ಪಾತ್ರಧಾರಿ ಆಗಿದ್ದಾಳೆ. ಮುಂದೆಯೂ ಸಹ ಒಳ್ಳೆಯ ಪ್ರಾಜೆಕ್ಟ್ ಗಳಿಗೆ ಹಣ ಹೂಡುವುದಾಗಿ ಆಕೆ ತಿಳಿಸಿದ್ದಾಳೆ. ಒಳ್ಳೇದು ಬಿಡಿ ಮುಂದೆ ಚಾನ್ಸ್ ಸಿಗದೇ ಇದ್ದಾಗ ತನ್ನ ನಿರ್ಮಾಣದಲ್ಲೇ ನಟಿಸ ಬಹುದು.. !

ವೆಬ್ದುನಿಯಾವನ್ನು ಓದಿ