ಹಾಲಿವುಡ್ ನಟ ಲಿಯೋನಾರ್ಡ್ ಡಿಕಾಪ್ರಿಯೊಗೆ ಬಿಗ್ ಬಿ ಜೊತೆ ನಟಿಸಲಿಷ್ಟವಂತೆ!
ಬುಧವಾರ, 15 ಜನವರಿ 2014 (12:14 IST)
PR
PR
ಬಾಲಿವುಡ್ ನಟ ಲಿಯೋನಾರ್ಡ್ ಡಿಕಾಪ್ರಿಯೊಗೆ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸಲು ಇಷ್ಟವಂತೆ. ಈ ಜೋಡಿ ಈಗಾಗಲೇ ಒಂದು ಬಾರಿ ತೆರೆಯ ಮೇಲೆ ಜಾಗವನ್ನು ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ನಟ ಲಿಯೋನಾರ್ಡ್ ಡಿಕಾಪ್ರಿಯೊ. ಅಮಿತಾಬ್ ಅತ್ಯಂತ ಪ್ರತಿಭಾವಂತ ಹಾಗು ಒಳ್ಳೆಯ ಮನದ ವ್ಯಕ್ತಿ ಎಂದು ಹೇಳಿದ್ದಾರೆ ಈತ.
ಅಮಿತಾಬ್ ಅವರ ಜೊತೆ ಮತ್ತೆ ನಟಿಸಲು ಅವಕಾಶ ದೊರೆತರೆ ನಾನ್ಮು ಅದನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ ಈ ಟೈಟಾನಿಕ್ ಹೀರೋ ! ತನ್ನ 71 ನೇ ವಯೊಮಿತಿಯಲ್ಲು ನಟ ಅಮಿತಾಬ್ ಅವರು ಹೊಂದಿರುವ ಜೀವನೋತ್ಸಾಹ ಮಾದರಿ ಮತ್ತು ಅನುಕರಣೀಯ ಎಂದಿದ್ದಾರೆ ಈ ಹಾಲಿವುಡ್ ನಟ. ದ ಗ್ರೇಟ್ ಗಟ್ಸ್ ಬಿ ಚಿತ್ರದಲ್ಲಿ ಈ ಜೋಡಿ ಒಂದಾಗಿ ನಟಿಸಿದ್ದರು.