ಹಾಲಿವುಡ್ ಮಂದಿಯನ್ನೇ ತಲ್ಲಣ ಮಾಡಿದ ಧೂಂ3 ಗಳಿಕೆ !

ಬುಧವಾರ, 1 ಜನವರಿ 2014 (17:41 IST)
ಯಶ್ ಫಿಲಿಮ್ಸ್ ಅವರ ಬಹುನಿರೀಕ್ಷಿತ ಚಿತ್ರ ಧೂಂ3 . ಇದಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಸಂಗತಿಗಳು ಹೊರ ಬರುತ್ತಲೇ ಇತ್ತು, ಅದು ಬಿಡುಗಡೆ ಆಗುವ ತನಕ. ಈಗ ಬಿಡುಗಡೆ ಆದ ಬಳಿಕವೂ ಸುದ್ದಿ ಮಾಡುತ್ತಿದೆ ಕಲೆಕ್ಷನ್ ಮಾಡುವುದರ ಮುಖಾಂತರ! ಈ ಚಿತ್ರದ ಕಲೆಕ್ಷನ್ ಈವರೆಗೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದಲ್ಲದೇ ಈ ಚಿತ್ರವು ಈ ವರೆಗೂ ಯಾವುದೇ ಚಿತ್ರವೂ ಮಾಡಿರದಂತಹ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸಿನ ಅನೇಕ ದಾಖಲೆಗಳನ್ನು ಮುರಿದಿದೆ. ದಿನೇ ದಿನೇ ಇದರ ಕಲೆಕ್ಷನ್ ಪ್ರಮಾಣ ಹೆಚ್ಚಾಗುತ್ತಲೇ ಬಂದಿದೆ.

PR
PR
ಹಿಂದೆಲ್ಲಾ ಬಾಲಿವುಡ್ ಕಿಂಗ್ ಗಳ ಹೆಸರು ಶಾರೂಕ್ ಖಾನ್ ಮತ್ತು ಸಲ್ಮಾನ್ ಖಾನ್ ಹೆಸರು ಮಾತ್ರ ಕೇಳಿ ಬರುತ್ತಿತ್ತು. ಆದರೇ ಈಗ ಅವರ ಹೆಸರಲ್ಲ ಅಮೀರ್ ಖಾನ್ ಹೆಸರು ಮಾತ್ರ ಎಲ್ಲೆಡೆ ಸದ್ದು ಮಾಡುತ್ತಿದೆ. ಧೂಂ3 ಡಿಸೆಂಬರ್ 30 ರಷ್ಟರಲ್ಲಿ ಸುಮಾರು 425.17 ಕೋಟಿಗಳಷ್ಟು ಕಲೆಕ್ಷನ್ ಮಾಡಿದೆ.

ಇಂಡಿಯನ್ ಬಾಕ್ಸಾಫೀಸಿನ ಈ ಗಳಿಕೆಯು ಹಾಲಿವುಡ್ ಮಂದಿಯನ್ನು ಇತ್ತ ತಿರುಗಿ ನೋಡುವಂತೆ ಮಾಡಿದೆ. ಧೂಂ3 ಯಶಸ್ವಿಯಿಂದ ಹಾಲಿವುಡ್ ದೊಡ್ಡ ದೊಡ್ಡ ಕಂಪನಿಗಳು ಭಾರತೀಯ ಚಿತ್ರಗಳನ್ನು ನಿರ್ಮಿಸುವ ಆಸ್ಥೆ ತೋರುತ್ತಿವೆ.

ಈವರೆಗೂ ಧೂಂ3 ಭಾರತೀಯ ಮಾರುಕಟ್ಟೆಯಲ್ಲಿ ಪಡೆದ ಮೊತ್ತ 296.ಕೋಟಿ ರೂಪಾಯಿಗಳು,ವಿದೇಶಗಳಲ್ಲಿ ಗಳಿಕೆ ಮಾಡಿದ ಮೊತ್ತ 128.99 ಕೋಟಿ ರೂಪಾಯಿಗಳು. ಒಟ್ಟು ವಿಶ್ವವ್ಯಾಪ್ತಿಯಾಗಿ ಗಳಿಕೆ ಮಾಡಿದ ಮೊತ್ತ 425.17 ಕೋಟಿ ರೂಪಾಯಿಗಳು.

ವೆಬ್ದುನಿಯಾವನ್ನು ಓದಿ