ಹೃತಿಕ್ ದಾಂಪತದ ಬಿರುಕು ವಿಚ್ಛೇದನದಲ್ಲಿ ಅಂತ್ಯ?

ಗುರುವಾರ, 5 ಡಿಸೆಂಬರ್ 2013 (10:50 IST)
PR
ಬಹಳ ದಿನಗಳಿಂದ ಸಣ್ಣ ಮಟ್ಟದಲ್ಲಿ ಕೇಳಿ ಬರುತ್ತಿದ್ದ ಸುದ್ದಿ ಅಂದರೆ ಹೃತಿಕ್ ಮತ್ತು ಸೂಸಾನ್ ಕುಟುಂಬದಲ್ಲಿ ಲಯ ತಪ್ಪಿದೆ. ಅವರಿಬ್ಬರೂ ಬೇರೆ ಆಗುತ್ತಿದ್ದಾರೆ. ಚಿತ್ರರಂಗದ ಯಶಸ್ವಿ ನಾಯಕ ಹೃತಿಕ್ ರೋಶನ್ ನಟ ಸಂಜಯ್ ಖಾನ್ ಮಗಳ ನ್ನು ಪ್ರೀತಿಸಿ ಮದುವೆಯಾಗಿದ್ದರು. 20 ಡಿಸೆಂಬರ್ 2000ರಲ್ಲಿ ಬಾಳ ಸಂಗಾತಿಗಳಾದ ಜೋಡಿ 14 ವರ್ಷಗಳ ನಂತರ ಬೇರೆ ಆಗಲು ನಿರ್ಧರಿಸಿದ್ದಾರೆ ಎನ್ನುವುದು ಈಗ ಬಿ ಟೌನ್ ನಲ್ಲಿ ಓಡಾಡುತ್ತಿರುವ ಹಸಿಬಿಸಿ ಸುದ್ದಿ.

ಬಹಳ ದಿನಗಳಿಂದ ಸೂಸಾನ್ ತನ್ನ ಎರಡು ಮಕ್ಕಳೊಂದಿಗೆ ಬೇರೆ ವಾಸಿಸಲು ಆರಂಭಿಸಿದ್ದಾರೆ. ಕ್ರಿಶ್3 ಸಮಯದಲ್ಲಿ ಈ ದಂಪತಿಗಳ ಬಾಂಧವ್ಯದ ನಡುವೆ ತೇಪೆ ಹಾಕಿದ್ದರೂ ಈಗದು ಹರಿಯಲು ಆರಂಭವಾಗಿದೆ ಎಂಬುದೇ ದುರಂತ. ಸುಸಾನ್ ಈಗ ಹೃತಿಕ್ ರೋಶನ್ ಜುಹೂ ಮನೆಯಿಂದ ವರ್ಸೋವಾಕ್ಕೆ ಬಂದು ನೆಲೆಸಿದ್ದಾರೆ. ಮಾಹಿತಿ ಪ್ರಕಾರ ಈ ದಂಪತಿಗಳು ಬೇರೆ ಆಗುವುದಕ್ಕೆ ನಿಶ್ಚಯಿಸಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರಂತೆ! ವಿದೇಶಿ ನಟಿಯೊಂದಿಗೆ ಲವ್ವಿಡವ್ವಿ ಆರಂಭವಾದ ಹಿನ್ನಲೆ ದಾಂಪತ್ಯದ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಕ್ರಿಶ್ ಸಿನಿಮಾದ ಸೈಡ್ ಎಫೆಕ್ಟ್ ಹೃತಿಕ್ ಸುಸಾನ್ ದಾಂಪತ್ಯದ ಮೇಲಾಗಿರುವುದು ಅತ್ಯಂತ ಖೇದಕರ ಸಂಗತಿ!

ವೆಬ್ದುನಿಯಾವನ್ನು ಓದಿ