ಅಂತೂ ಗ್ಯಾರೆಂಟಿ ಐಶ್ ಮಣಿರತ್ನಂ ಚಿತ್ರದಲ್ಲಿ ನಟಿಸುತ್ತಾಳಂತೆ !

ಮಂಗಳವಾರ, 28 ಜನವರಿ 2014 (16:09 IST)
PR
ಮಾಡಲಿಂಗ್ ಪ್ರಪಂಚದಲ್ಲಿ ನಂಬರ್ ಒನ್ ಸ್ಥಾನ ಪಡೆದ ಐಶ್ವರ್ಯ ಳನ್ನು 1997ರಲ್ಲಿ ಬೆಳ್ಳಿತೆರೆಗೆ ತಂದ ನಿರ್ದೇಶಕ ಮಣಿರತ್ನಂ. ಅವರು ತಮ್ಮ ಇರುವರ್ ಚಿತ್ರದಲ್ಲಿ ಈ ಚೆಲುವೆಗೆ ಅವಕಾಶ ನೀಡಿದರು. ಆ ಮುಖಾಂತರ ಬೆಳ್ಳಿತೆರೆಯ ಮನೆಗೆ ಹೊಕ್ಕ ಐಶ್ . ಆ ಬಳಿಕ ಅನೇಕ ಅವಕಾಶಗಳನ್ನು ತನ್ನದಾಗಿಸಿ ಕೊಂಡಳು . ಆದರೆ ಆಕೆಯ ಮೊದಲ ಚಿತ್ರ ಇರುವರ್ ಯಶಸ್ವಿ ಆಗಲಿಲ್ಲ. ಹಾಗೆಂದು ಚಿತ್ರರಂಗ ಆಕೆಯನ್ನು ಬಿಡಲೇ ಇಲ್ಲ.

ಗ್ಲಾಮರ್ ವಿಷಯದಲ್ಲಿ ಮುಂದೆ ಇದ್ದ ಈ ಮಾಜಿ ಮಿಸ್ ವರ್ಲ್ಡ್ ಗೆ ಅಪಾರವಾದ ಅವಕಾಶಗಳು ದೊರಕಿ ಹೆಚ್ಚು ಯಶಸ್ವಿ ಆದಳು. ಅದರ ಜೊತೆಗೆ ಪ್ರೇಮ ಪ್ರಕರಣ ಗಳಿಂದಲೂ ಸಹ ಹೆಚ್ಚು ಗೊತ್ತಾದಳು ಈ ಚೆಲುವೆ. ವೃತ್ತಿ ಬದುಕಲ್ಲಿ ಆಕೆ ಎಷ್ಟೇ ಬ್ಯುಸಿ ಆದರು ತನ್ನ ಗುರು ಮಣಿರತ್ನಂ ಅವರ ಚಿತ್ರಗಳಲ್ಲಿ ನಟಿಸಲು ಅಸಮ್ಮತಿ ತೋರುತ್ತಿರಲಿಲ್ಲ. ಮದುವೆಯಾಗಿ ಮಗಳು ಆರಾಧ್ಯ ಹುಟ್ಟಿದ ಬಳಿಕ ಬಹುತೇಕ ಚಿತ್ರರಂಗದಿಂದ ದೂರ ಉಳಿದಿರುವ ಐಶ್ ಮತ್ತೆ ನಟಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾಳೆ. ಆಕೆಯ ಸೆಕೆಂಡ್ ಇನ್ನಿಂಗ್ಸ್ ಕಡೆಗೆ ಈಗ ಗಮನ ನೀಡಿದ್ದಾಳೆ.

ಮಹೇಶ್ ಬಾಬು ಹೀರೋ ಆಗಿರುವ ಚಿತ್ರದಲ್ಲಿ ನಾಗಾರ್ಜುನ ಸೇರಿದಂತೆ ಅನೇಕ ಪ್ರತಿಷ್ಟಿತ ಕಲಾವಿದರು ನಟಿಸುತ್ತಿರುವ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಮಣಿರತ್ನಂ ಅವರ ಹೊಸ ಚಿತ್ರದಲ್ಲಿ ನಟಿಸಲು ಸಮ್ಮತಿ ಸೋಚಿಸಿದ್ದಾಲೆ ಐಶ್. ಸೊ ಈ ಮುಖಾಂತರ ಮತ್ತೆ ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ದಾಳೆ ಈ ಚೆಲುವೆ!

ವೆಬ್ದುನಿಯಾವನ್ನು ಓದಿ