ಅನುಷ್ಕಾ ನೀಡಿದ ಶಾಕಿಂಗ್ ನ್ಯೂಸ್!

ಸೋಮವಾರ, 6 ಜನವರಿ 2014 (11:45 IST)
PR
ಮುವ್ವತ್ತರ ಹರೆಯದ ಕರಾವಳಿ ಸುಂದರಿ ಅನುಷ್ಕಾ ಮದುವೆ ಬಗ್ಗೆ ತನ್ನದೇ ಆದ ಹೊಸದಾದ ನಿಯಮಗಳನ್ನು ಸಿದ್ಧ ಮಾಡಿದ್ದಾಳೆ. ಮದುವೆ ಬದುಕಲ್ಲಿ ತುಂಬಾ ಮುಖ್ಯ ಎಂದು ನಂಬಿರುವವರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾಳೆ ಆಕೆ. ಮದುವೆಯನ್ನು ಯಾವಾಗ ಬೇಕಾದರೂ ಆಗ ಬಹುದು. ಆದರೆ ಬಂದ ಅವಕಾಶಗಳನ್ನು ಬಿಡ ಬಾರದು.

ಜೀವನದಲ್ಲಿ ಅವಕಾಶಗಳು ಸಿಗುವುದು ಕಡಿಮೆ. ನಾವು ಮದುವೆ ಮಾಡಿಕೊಳ್ಳಲೆಂದು ನಾವು ಹುಟ್ಟಿಲ್ಲ ಎಂದು ನೇರಾನೇರವಾಗಿ ಹೇಳಿದ್ದಾಳೆ ಈ ಚೆಲುವೆ. ಆದ್ದರಿಂದ ಆಕೆ ಮದುವೆ ಬಗ್ಗೆ ಹೆಚ್ಚು ನಿಗಾ ವಹಿಸುತ್ತಿಲ್ಲ. ಅಲ್ಲದೆ ಈಗ ಆಕೆ ತೆಲುಗು ತಮಿಳು ಚಿತ್ರರಂಗದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬಳಾಗಿದ್ದು ಅವಕಾಶಗಳು ಹೇರಳವಾಗಿದೆ. ಅದೂ ಸಹ ಇಂತಹ ನಿರ್ಧಾರಕ್ಕೆ ಬರಲು ಕಾರಣವಾಗಿರ ಬಹುದು.ತನ್ನ ಮದುವೆ ಬಗ್ಗೆ ಆಕೆ ಕ್ಲಾರಿಟಿ ನೀಡಿರುವುದರಿಂದ ದೊಡ್ಡ ಪ್ರಮಾಣದ ಇನ್ವೆಸ್ಟ್ ಮಾಡುತ್ತಿರುವ ಹಿರಿಯ ನಟರಿಗೆ ಹೀರೋಯಿನ್ ಸಮಸ್ಯೆ ದೂರವಾಗಿದೆ ಎಂದೆ ಹೇಳಬಹುದು ಎನ್ನುತ್ತಿದೆ ಟಿ ಟೌನ್. ಪವನ್ ಕಲ್ಯಾಣ್ ಜೊತೆ ನಟಿಸುವ ಆಸೆ ಹೊಂದಿರುವ ಜೇಜಮ್ಮಳಿಗೆ ಅದು ನೆರವೇರುವ ಕಾಲ ಸನ್ನಿಹಿತವಾಗುತ್ತಿದೆ!

ಇತ್ತೀಚೆಗೆ ತನಗೆ ಗಂಡು ಹುಡುಕುತ್ತಿದ್ದಾರೆ ಎಂದು ಹೇಳಿದ್ದ ಈ ನಟಿ ಈಗ ಬೇರೆ ಪದ ಹಾಡುತ್ತಿರುವುದು ಆಕೆಗೆ ಸಿಕ್ಕಿರುವ ಯಥೇಚ್ಛವಾದ ಅವಕಾಶಗಳು ಕಾರಣ ಎಂದು ಕುಹಕವಾಡುತ್ತಿದ್ದಾರೆ ಟಾಲಿವುಡ್ ಮಂದಿ.

ವೆಬ್ದುನಿಯಾವನ್ನು ಓದಿ