ಅಭಿಮಾನಿಗಳನ್ನು ಮೋಡಿ ಮಾಡುತ್ತಿದೆ ಮಾಧುರಿ ಹಾಡು

ಮಂಗಳವಾರ, 7 ಜನವರಿ 2014 (12:22 IST)
PR
ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಹೆಸರು ವಾಸಿಯಾದ ನಟಿ ಮಾಧುರಿ ದೀಕ್ಷಿತ್ ನೆನೆ. ಮದುವೆಗೆ ಮುನ್ನ ಇದ್ದ ಚಾರ್ಮ್ ಎರಡು ಮಕ್ಕಳಾದ ಬಳಿಕವು ಉಳಿಸಿಕೊಂಡಿರುವ ನಟಿ ಮಾಧುರಿ. ಈ ನಟಿಯ ಹೊಸ ಚಿತ್ರ ದೇದ್ ಇಷ್ಕಿಯಾ. ಇದರ ಹಮಾರಿ ಅತರಿಯಾ ಎನ್ನುವ ಹಾಡಿನಲ್ಲಿ ಈಕೆ ಮಾಡಿರುವ ಡ್ಯಾನ್ಸ್ ಫೇಸ್ ಬುಕ್ ನಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದೆ. ಈ ಚಿತ್ರದಿಂದ ಆಕೆಯ ತಾರಾ ಪಟ್ಟದಲ್ಲಿನ ಗ್ರಾಫ್ ಅತ್ಯಂತ ಉತ್ತಮ ರೀತಿಯಿಂದ ಮೇಲೇರಿದೆ.

ಆಕೆಯನ್ನು ನೇರವಾಗಿ ನೋಡುವ ಆಶಯ ವ್ಯಕ್ತ ಪಡಿಸಿರುವ ಅನೇಕಾನೇಕ ಅಭಿಮಾನಿಗಳು ತಮ್ಮ ಮನವಿ ಮತ್ತು ಆಸೆಯನ್ನು ಚಿತ್ರದ ನಿರ್ಮಾಣದ ಸಂಸ್ಥೆಗೆ ಕಳುಹಿಸುತ್ತಿದ್ದಾರೆ. ತಾವು ಮಾಧುರಿಯನ್ನು ನೇರವಾಗಿ ನೋಡ ಬೇಕು , ಆಕೆಯ ಜೊತೆ ಫೋಟೋ ತೆಗಿಸಿಕೊಲ್ಲ ಬೇಕು ಎನ್ನುವ ಆಶಯವನ್ನು ವ್ಯಕ್ತ ಪಡಿಸುತ್ತಿದ್ದಾರೆ ಅಭಿಮಾನಿಗಳು. ಮಾಧುರಿಯನ್ನು ಯಾರು ಸುಂದರವಾಗಿ ಚಿತ್ರಿಸಿದರೆ ಅವರಿಗೆ ಮಾಧುರಿಯನ್ನು ಭೇಟಿ ಆಗುವ ಅವಕಾಶವನ್ನು ನೀಡುತ್ತೇವೆ ಎಂದು ಹೇಳಿ ಇದಕ್ಕೆ ಸಂಬಂಧಿಸಿದಂತೆ ಆ ನಿರ್ಮಾಣ ಸಂಸ್ಥೆಯವರು ಸಬ್ಸೆ ಬಡಾ ದಿವಾನ ಅನ್ನುವ ಅರ್ಜಿಯನ್ನು ದೇದ್ ಇಷ್ಕಿಯಾ ಸಿನಿ ತಂದ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರೆ. ಈಕೆ ಅಸಂಖ್ಯ ಅಭಿಮಾನಿಗಳು ಮದುರಿಯ ಈ ಪೋಸ್ಟ್ ಗೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡಿ ತಮ್ಮ ಅಭಿಮಾನ ವ್ಯಕ್ತ ಪಡಿಸಿದ್ದಾರೆ. 1200 ಕ್ಕೂ ಅಧಿಕ ಮಂದಿಯಿಂದ ಮಾಧುರಿ ಚಿತ್ರವನ್ನು, 500 ಕ್ಕೂ ಅಧಿಕ ಮಂದಿ ಮಾಧುರಿ ಬಗ್ಗೆ ಕವಿತೆಯನ್ನು ಬರೆದು ಕಳುಹಿಸಿದ್ದಾರಂತೆ.

ವಿಶಾಲ್ ಭಾರದ್ವಾಜ್ ಪಿಕ್ಚರ್ ಜೊತೆ ಸೇರಿ ಶೀಮಾರಾವು ಎಂಟರ್ ಟೈನ್ ಮೆಂಟ್ ಸೇರಿ ಸಿದ್ಧ ಮಾಡುತ್ತಿರುವ ದೇದ್ ಇಷ್ಕಿಯಾ ಚಿತ್ರವನ್ನು ಅಭಿಷೇಕ್ ಚೌಬೆ ನಿರ್ದೇಶಿಸುತ್ತಿದ್ದಾರೆ. ಮಾಧುರಿ ದೀಕ್ಷಿತ್ - ನೆನೆ ಜೊತೆಗೆ ಮಾಧುರಿ ದೀಕ್ಷಿತ್ -ನೆನೆ, ನಾಸಿರುದ್ದೀನ್ ಷಾ , ಅರ್ಶದ್ ವಾರ್ಸಿ , ವಿಜಯ್ ರಾಜ್ ಮುಂತಾದವರು ನಟಿಸಿದ್ದಾರೆ . ಈ ತಿಂಗಳು 10 ರಂದು ಚಿತ್ರ ಬಿಡುಗಡೆ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ