ಆಹಾ ರಾಣಿ ಮದ್ವೆಯಂತೆ..!ಅದೂ ಈ ವರ್ಷವೇ ಅಂತೆ!!

ಬುಧವಾರ, 1 ಜನವರಿ 2014 (17:11 IST)
ಬಾಲಿವುಡ್‌ನ ಸುಂದರಿಗಳಲ್ಲಿ ರಾಣಿ ಮುಖರ್ಜಿ ಸಹ ಒಬ್ಬಳು. ಆಕೆ ತನ್ನ ನಟನೆ ಮತ್ತು ಮಾದಕತೆಯಿಂದ ರಸಿಕರ ಮನ ಗೆದ್ದಿದ್ದಾಳೆ. ಮೊದಲಿದ್ದ ಆಕೆಯ ಅದೃಷ್ಟ ಕ್ರಮೇಣ ಕಡಿಮೆ ಆದಂತೆ ರಾಣಿ ಮುಖರ್ಜಿ ನಿಧಾನವಾಗಿ ತೆರೆಮರೆ ಆದಳು. ಆದರೆ ಆಕೆ ಎಷ್ಟೇ ಮೌನವಾಗಿದ್ದರು ರಾಣಿ ಮದುವೆ ವಿಷಯದಲ್ಲಿ ಸದಾ ಸುದ್ದಿ ಇದ್ದೇ ಇತ್ತು. ಇದಕ್ಕೆ ಸಂಬಂಧಿಸಿದಂತೆ ಆದಿತ್ಯ ಚೋಪ್ರ ನಡುವಿನ ಪ್ರೇಮ ಕಹಾನಿಯೂ ಸಹ ಎಲ್ಲಡೆ ಸದ್ದು ಮಾಡುತ್ತಿತ್ತು. ಆದರೇ ಇವೆಲ್ಲಕ್ಕೂ ಕಡಿವಾಣ ಹಾಕಲು ಈ ಜೋಡಿ ಸಿದ್ಧವಾಗಿದ್ದಾರೆ. ಇವರು ಫೆಬ್ರವರಿಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ.

PR
PR
ಇವರ ಮದುವೆ ಜೋಧ್ ಪುರ್ ನಲ್ಲಿ ಇರುವ ಉಮೈದ್ ಪ್ಯಾಲೆಸ್ ನಲ್ಲಿ ನಡೆಯುತ್ತದೆ ಎಂಬುದು ಸದ್ಯದ ಸುದ್ದಿ. ಮಾಧ್ಯಮದವರಿಗೆ ಸುದ್ದಿ ತಿಳಿಸಲು ಇಚ್ಛಿಸದೆ ಈ ಎರಡು ಮನೆಯವರು ಈ ಸಂಗತಿಯನ್ನು ಗೋಪ್ಯವಾಗಿ ಇಟ್ಟಿದ್ದಾರೆ ಎಂಬುದು ಸದ್ಯದ ಸುದ್ದಿ. ಇಲ್ಲಿವರೆಗೂ ಆದಿತ್ಯ ಚೋಪ್ರಾ ಮತ್ತು ರಾಣಿ ಮುಖರ್ಜಿ ಒಟ್ಟಿಗೆ ಬದುಕುತ್ತಿದ್ದಾರೆ, ಅವರಿಗೆ ಈಗಾಗಲೇ ಮದುವೆ ಆಗಿದೆ ಎನ್ನುವ ಸುದ್ದಿಯನ್ನು ಹರಡಿದ್ದರು ಬಾಲಿವುಡ್ ಮಂದಿ.

ಈಗ ಅವೆಲ್ಲಕ್ಕೂ ಅಂತ್ಯ ಹಾಡಲು ಹೊರಟಿದ್ದಾರೆ ಈ ಜೋಡಿ. ಬಾಲಿವುಡ್ ನ ಪ್ರಸಿದ್ಧ ಚಿತ್ರ ನಿರ್ಮಾಪಕರಾದ ಯಶ್ ಚೋಪ್ರಾ ಅವರ ಮಗ ಆದಿತ್ಯ ಚೋಪ್ರಾ ,ಆತ ತನ್ನ ಬಾಲ್ಯದ ಗೆಳತಿ ಪಾಯಲ್ ಳನ್ನು ಪ್ರೀತಿಸಿ ಮದುವೆ ಆಗಿದ್ದರು. ಆ ಬಳಿಕ ಅವರ ಬದುಕಲ್ಲಿ ರಾಣಿ ಮುಖರ್ಜಿ ಪ್ರವೇಶಿಸಿ , ರಾಣಿಗಾಗಿ ಆತ ಪಾಯಲ್ ಜೊತೆ ಡೈವೋರ್ಸ್ ನೀಡಿದ್ದರು.

ವೆಬ್ದುನಿಯಾವನ್ನು ಓದಿ