ಇಲಿಯಾನ ಸೈಫ್ ಜೊತೆ ಸಕತ್ ಎಂಜಾಯ್ ಮಾಡಿದ ಸಂಗತಿಇಲ್ಲಿದೆ!

ಸೋಮವಾರ, 6 ಜನವರಿ 2014 (11:45 IST)
PR
ಟಾಲಿವುಡ್ ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದ ಗೋವಾ ಬ್ಯೂಟಿ ಬರ್ಫಿ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿದಳು. ಆ ಚಿತ್ರದ ಯಶಸ್ಸಿನಿಂದ ಆಕೆಗೆ ಅವಕಾಶಗಳ ಬಾಗಿಲು ತೆರೆಯಿತು. ಬರ್ಫಿ ಚಿತ್ರದ ಅಭಿನಯಕ್ಕಾಗಿ ಆಕೆಗೆ ಬೆಸ್ಟ್ ಡೆಬ್ಯೂ ಅವಾರ್ಡ್ ದೊರೆತಿದೆ. ತೆಲುಗಿನಲ್ಲಿ ದೇವ್ ದಾಸ್ ಚಿತ್ರದ ಮುಖಾಂತರ ಎಂಟ್ರಿ ಆದ ಈ ನಟಿ ಈಗ ಟಾಪ್ ಹೀರೋಯಿನ್ ಗಳ ಪಟ್ಟಿಗೆ ಸೇರ್ಪಡೆ ಆದಳು. ಆ ಬಳಿ ಆಕೆ ನಟಿಸಿದ ಪೋಕಿರಿ ಸಹ ಸೂಪರ್ ಡೂಪರ್ ಗೆಲುವು ಸಾಧಿಸಿತು.

ಬಾಲಿವುಡ್ ನಲ್ಲಿಯೂ ಆಕೆಗೆ ಗೆಲುವಿನ ಸರಮಾಲೆ. ಆಕೆಯ ಬಾಲಿವುಡ್ ಕೆರಿಯರ್ ಚೊಚ್ಚಿಲ ಚಿತ್ರ ಬರ್ಫಿ ಸಿಕ್ಕಾಪಟ್ಟೆ ಹೆಸರನ್ನು ನೀಡಿದೆ.

ಆದರೆ ಈ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳು ಇಲ್ಲದೆ ಹೋದ್ದರಿಂದ ಆಕೆಯನ್ನು ಸಿ ಗ್ರೇಡ್ ಸಿನಿಮಾ ವೀಕ್ಷಿಸುವ ಪ್ರೇಕ್ಷಕರು ಇಷ್ಟ ಪಡಲಿಲ್ಲ. ಇದರಿಂದ ಮುಂದಿನ ಚಿತ್ರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜಾಗರೂಕತೆ ವಹಿಸುತ್ತಿದ್ದಾಳಂತೆ!

ವೆಬ್ದುನಿಯಾವನ್ನು ಓದಿ