ಕರೀನಾಳಿಗೆ ಬುದ್ಧಿ ಕೆಡ್ತಾ?

ಭಾನುವಾರ, 12 ಜನವರಿ 2014 (13:20 IST)
PR
PR
ಕರೀನಾಳಿಗೇನಾದರೂ ಬುದ್ಧಿ ಕೆಟ್ಟಿದೆಯಾ, ಇದ್ದರೂ ಇರಬಹುದು ಎಂದು ಹೇಳುತ್ತಿದ್ದಾರೆ ಬಾಲಿವುಡ್ ಮಂದಿ. ನಟಿ ಕರೀನ ಕಪೂರ್ ಖಾನ್ ಲೆಕ್ಕಾಚಾರದ ವಿಷಯದಲ್ಲಿ ತುಂಬಾ ಪರ್ಫೆಕ್ಟ್ . ಆಕೆ ಏನು ಬೇಕಾದ್ರೂ ಬಿಡ್ತಾಳೆ ವ್ಯವಹಾರದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟು. ಈಗ ಆಕೆ ಗ್ರೀನ್ ಟಿ ಆಡ್ ನಲ್ಲಿ ನಟಿಸಲು ಒಪ್ಪಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಆಕೆ ಕೈ ಗೊಂಡ ನಿರ್ಧಾರದಿಂದ ಬಾಲಿವುಡ್ ಮಂದಿ ಆಶ್ಚರ್ಯ ಚಕಿತರಾಗಿದ್ದಾರೆ. ಸಾಮಾನ್ಯವಾಗಿ ಇಂತಹ ಡೀಲಿಂಗ್ ಗೆ ಆಕೆ ಐದು ಕೋಟಿ ಗಳನ್ನೂ ನಿಗದಿ ಮಾಡುತ್ತಾಳೆ.

ಆದರೆ ಈ ಜಾಹಿರಾತಿಗೆ ಮಾತ್ರ ಕೇಳಿರುವ ಮೊತ್ತ ಮೂರು ಕೋಟಿ ರೂಪಾಯಿಗಳು. ಇದರ ಬಗ್ಗೆ ಆಕೆ ಹೇಳುವುದೇನು ಗೊತ್ತೆ. ಗ್ರೀನ್ ಟೀ ಅರೋಗ್ಯ ಕಾಪಾಡುವ ಪಾನೀಯ. ಇದರಿಂದ ಜನರಿಗೆ ಹೆಚ್ಚು ಉಪಕಾರ ಆಗುತ್ತದೆ.

PR
PR
ಆದ್ದರಿಂದ ತುಂಬಾ ಹೆಚ್ಚಿನ ಮೊತ್ತವನ್ನು ಡಿಮ್ಯಾಂಡ್ ಮಾಡದೆ ಕಡಿಮೆ ಮೊತ್ತದಲ್ಲಿ ನಟಿಸುತ್ತಿದ್ದೇನೆ. ಅದು ಸರಿ ಅನ್ನಿ, ಆಕೆಗೆ ಆರೋಗ್ಯದ ಬಗ್ಗೆ ಗಮನ ಒಂದು ಇಂಚು ಜಾಸ್ತೀನೆ ಇದೆ.ಅದಕ್ಕೆ ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ ಅಂತಾರೆ ಅನೇಕರು.

ಮತ್ತೂ ಒಂದು ಸುದ್ದಿಯ ಪ್ರಕಾರ, ತಾನು ಹೆಚ್ಚು ಡಿಮ್ಯಾಂಡ್ ಮಾಡಿದರೆ ತನಗೆ ಸಿಕ್ಕ ಛಾನ್ಸ್ ಬೇರೆಯವರ ಪಾಲಾಗುತ್ತದೆ ಎಂಬುದು ಅರಿತ ಈ ಜಾಣೆ ಹಣದ ವಿಚಾರದಲ್ಲಿ ಸಡಲಿಕೆ ಮಾಡಿಕೊಂಡಿದ್ದಾಳಂತೆ. ಆದರೆ ಕರೀನಾಳ ನಿರ್ಧಾರದಿಂದ ಉಪಯೋಗ ಆಗಿರೋದು ಕಂಪನಿಯವರಿಗೆ ಮಾತ್ರ!

ವೆಬ್ದುನಿಯಾವನ್ನು ಓದಿ