ದಕ್ಷಿಣ ಭಾರತ ಪ್ರಸಿದ್ಧ ನಟಿ ತ್ರಿಶ. ಆಕೆಗೆ ಸಲ್ಮಾನ್ ಖಾನ್ ಜೊತೆ ಮದುವೆ ಆಗೋಕೆ ಇಷ್ಟ ಅಂತೆ ಹಾಗಂತ ಕಾಫಿ ವಿತ್ ಡಿಡಿ ಯಲ್ಲಿ ಹೇಳಿಕೊಂಡಿದ್ದಾಳೆ. ತ್ರಿಶಾ ಮತ್ತು ಜೀವ ಒಟ್ಟಿಗೆ ನಟಿಸಿರುವ ಚಿತ್ರ ಎಂದ್ರೆನದ್ರುಂ ಪುನ್ನಗೈ ಕಳೆದ ವಾರ ಬಿಡುಗಡೆ ಆಗಿ ಬಾಕ್ಸ್ ಆಫೀಸಿನಲ್ಲಿ ಯಶಸ್ವಿ ಆಗಿದೆ.
ಈ ತಾರ ಜೋಡಿಯ ಜೊತೆ ಕಾಫಿ ವಿತ್ ಕಾರ್ಯಕ್ರಮದಲ್ಲಿ ಮಾತನಾಡಿದಾಗ ತ್ರಿಶ ತನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತ ತನಗೆ ಸಲ್ಮಾನ್ ಖಾನ್ ಜೊತೆ ಮದುವೆ ಆಗೋಕೆ ಇಷ್ಟ ಎಂದು ಹೇಳಿದ್ದಾಳೆ. .
PR
ಈಕೆ ಬಾಲಿವುಡ್ ನಲ್ಲಿ ಕಟ್ಟಾ ಮೀಟಾ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಿದ್ದಾಳೆ. ತನ್ನನ್ನು ಹಿಂದಿ ನಟ ಸಲ್ಮಾನ್ ಖಾನ್ ಪ್ರಪೋಸ್ ಮಾಡಿದರೆ ಖಂಡಿತಾ ಮದುವೆ ಆಗ್ತೀನಿ ಎಂದು ಹೇಳಿದ್ದಾಳೆ ತ್ರಿಶ.
ಸಲ್ಮಾನ್ ಖಾನ್ ಅವರ ಆಪ್ತ ಮಿತ್ರ ಅಮೀರ್ ಖಾನ್ ಅವರು ಸಲ್ಮಾನ್ ಖಾನ್ ಅವರಿಗೆ ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ದಕ್ಷಿಣ ಭಾರತದ ಸುಂದರಿಯನ್ನು ಮದುವೆ ಆಗುವ ಆಸೆ ಇದೆ ಎನ್ನುವುದು ಈಗ ಬಿಚ್ಚಿಟ್ಟ ಸತ್ಯ. ಆ ಅವಕಾಶ ತನಗೆ ಒದಗಿ ಬಂದರೆ ತಾನು ತಪ್ಪದೆ ಆತನನ್ನು ಮದುವೆ ಆಗುತ್ತೇನೆ ಎಂದಿದ್ದಾಳೆ ತ್ರಿಶ. ನೋಡುವಾ ಏನಾಗುತ್ತೆ ಅಂತ !