ದೀಪಿಕ ಪಡುಕೋಣೆ- ರಣವೀರ್ ಸಿಂಗ್ ಭನ್ಸಾಲಿಯ ಮಸ್ತಾನಿಯಲ್ಲಿ ಒಂದಾಗುತ್ತಿದ್ದಾರಂತೆ !

ಮಂಗಳವಾರ, 8 ಏಪ್ರಿಲ್ 2014 (10:31 IST)
PTI
ರಾಮ್ ಲೀಲ ಚಿತ್ರದ ಜೋಡಿ ದೀಪಿಕ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತ್ತೆ ಒಂದಾಗಿದ್ದಾರೆ. ಅವರಿಬ್ಬರೂ ಈಗ ಐತಿಹಾಸಿಕ ಚಿತ್ರ ಒಂದಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದಲ್ಲಿ ಮಸ್ತಾನಿ ಪಾತ್ರವನ್ನು ದೀಪಿಕ ಪಡುಕೋಣೆ ಮಾಡುತ್ತಿದ್ದಾರೆ.

ಅದೇ ರೀತಿ ಬಾಜಿರಾವ್ ಅವರ ನಟನೆಯನ್ನು ರಣವೀರ್ ಸಿಂಗ್ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಂಜಯ್ ಲೀಲಾ ಭನ್ಸಾಲಿ ಅವರು ನಿರ್ಮಿಸುತ್ತಿದ್ದಾರೆ. 'ಬಜಿರೋ ಮಸ್ತಾನಿ' ಇದು ಆ ಚಿತ್ರದ ಹೆಸರಾಗಿದೆ.

PR
ಬಾಜಿರಾವ್ ಪಾತ್ರಕ್ಕೆ ರಣವೀರ್ ಗೆ ಮುನ್ನ ಶಾರುಖ್ ಖಾನ್ , ಅಜಯ್ ದೇವಗನ್ ಮುಂತಾದವರ ಬಗ್ಗೆ ಗಮನ ಹರಿಸಲಾಗಿತ್ತಾದರೂ ಅಂತಿಮವಾಗಿ ರಣವೀರ್ ಆಯ್ಕೆ ಆಗಿದ್ದಾರೆ. ಅಲ್ಲದೆ ಮಸ್ತಾನಿ ಪಾತ್ರದಲ್ಲಿ ನಟಿಸಲೆಂದು ಕರೀನ, ಕತ್ರಿನ ಕೈಫ್ ಅವರತ್ತ ಗಮನ ನೀಡಲಾಗಿದ್ದರು ಸಹ ಅಂತಿಮವಾಗಿ ದೀಪಿಕ ಪಡುಕೊಣೆಗೆ ನಟಿಸುವ ಅವಕಾಶ ದೊರಕಿದೆ.

ಆದರೆ ದೀಪಿಕಾ ಸುಮಾರು 150 ದಿನಗಳಷ್ಟು ಸಮಯವನ್ನು ಕರಣ್ ಜೋಹರ್ ಅವರ ಶುದ್ಧಿ ಚಿತ್ರದಲ್ಲಿ ನಟಿಸಲೆಂದು ಮೀಸಲಿಟ್ಟಿದ್ದಾರೆ. ಈಗ ಅವರಿಗೆ ಈಗ ಸಂಜಯ್ ಲೀಲಾ ಭನ್ಸಾಲಿ ಅವರ ಚಿತ್ರಕ್ಕೆ ಹೆಚ್ಚು ಸಮಯ ನೀಡುವುದಕ್ಕೆ ಸಾಧ್ಯ ಆಗುತ್ತಿಲ್ಲ ಎನ್ನುವ ಅಂಶವನ್ನು ಮೂಲಗಳು ತಿಳಿಸಿವೆ. . ವಿಷಯ ಏನೇ ಇರಲಿ ಅಂತೂ ದೀಪಿಕ ಈಗ ಮಸ್ತಾನಿ ಆಗುತ್ತಿದ್ದಾರೆ !

ವೆಬ್ದುನಿಯಾವನ್ನು ಓದಿ