ನಾನು ಇನ್ನುಮುಂದೆ ಜಾಸ್ತಿ ಎಕ್ಸ್ಪೋಸ್ ಮಾಡಲ್ಲ ಅಂದಿದ್ದಾಳೆ ಸನ್ನಿ ಲಿಯೋನು !

ಶನಿವಾರ, 5 ಏಪ್ರಿಲ್ 2014 (15:42 IST)
ಕೆನಡಿಯನ್ ಪೋರ್ನ್ ಸ್ಟಾರ್ ಬಾಲಿವುಡ್ ಚಿತ್ರರಂಗಕ್ಕೆ ಪರಿಚಯ ಆದ ಬಳಿಕ ಆಕೆ ನಟಿಸಿದ ಎಲ್ಲ ಚಿತ್ರಗಳಲ್ಲೂ ಯಾವುದೋ ಒಂದು ಸಂದರ್ಭದಲ್ಲಿ ಏಕ್ಸ್ಪೋಸಿಂಗ್ ಮಾಡುವುದಕ್ಕೆ ಆದ್ಯತೆ ಇದ್ದೆ ಇರುತ್ತದೆ.

ಸನ್ನಿ ಲಿಯೋನ್ ಚಿತ್ರದ ಬಗ್ಗೆ ಜನರು ಆಸಕ್ತಿ ಹೊಂದಿರುವುದು ಆಕೆಯ ದೇಹಸಿರಿ ಕಾಣುವುದಕ್ಕೆ ಮಾತ್ರ , ಆಕೆಯ ನಟನೆಯ ಕಾರಣದಿಂದ ಅಲ್ಲವೇ ಅಲ್ಲ ಎನ್ನುವ ಮಾತು ಬಿ ಟೌನ್ ನಲ್ಲಿ ಕಾಮನ್.ಮುಖ್ಯವಾಗಿ ಬಾಲಿವುಡ್ ನಲ್ಲಿ ತನ್ನ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ ಎಂದು ಆಕೆ ಹೇಳುತ್ತಿರುವ ಮಾತಲ್ಲಿ ಹುರುಳಿಲ್ಲ. ಆಕೆಯ ಬಿಚ್ಚುತನದ ಕಾರಣದಿಂದ ಜನರು ಆಕೆ ಸಿನಿಮಾ ನೋಡ್ತಾರೆ ವಿನಃ , ಒಬ್ಬ ನಟಿಯಾಗಿ ಗುರುತಿಸಿಲ್ಲ ಎಂದಿದ್ದಾರೆ ಬಿ ಟೌನ್ ನ ಅನೇಕಾನೇಕ ನಿರ್ದೇಶಕರು.

ಆದರೆ ಸನ್ನಿ ಲಿಯೋನ್ ಪರಿಸ್ಥಿತಿ ಹೇಗಿದೆ ಅಂದ್ರೆ ಆಕೆಯ ಬಳಿ ಬರುವ ನಿರ್ದೇಶಕರು ಇಂತಹ ದೃಶ್ಯಗಳಲ್ಲಿ ಆಕೆಯನ್ನು ಕಾಣಿಸಲು ಇಷ್ಟ ಪಡ್ತಾ ಇದ್ದಾರೆ. ತನಗೆ ಈ ರೀತಿ ದೇಹ ಸೌಂದರ್ಯ ತೋರಿಸಲು ಬೇಸರ ಇಲ್ಲ, ಆದರೆ ಒಂದೇ ಬಗೆಯ ಚಿತ್ರಗಳಲ್ಲಿ ನಟಿಸಿ ಬೋರಾಗಿದೆ. ನಾನು ಇನ್ನು ಮುಂದೆ ಕಥೆಗೆ ಪ್ರಾಧಾನ್ಯತೆ ಇರುವ ಸಿನಿಮಾಗಳಲ್ಲಿ ಮಾತ್ರ ನಟಿಸೋದು ಎಂದಿದ್ದಾಳೆ ಆಕೆಯ ಬಳಿ ಬಂದ ನಿರ್ದೇಶಕರುಗಳ ಬಳಿ.

ಹಳೆಯ ಸನ್ನಿ ಲಿಯೋನ್ ಳನ್ನು ಮರೆತು ಹೊಸ ಸನ್ನಿಯನ್ನು ಪ್ರೇಕ್ಷಕರು ನೋಡ ಬೇಕು ಎನ್ನುವ ಪಾಠವನ್ನು ಆಕೆ ಬಳಿಗೆ ಬಂದ ನಿರ್ಮಾಪಕರಿಗೆ ಬೋಧಿಸುತ್ತಿದ್ದಾಳಂತೆ ಆ ಮಾದಕ ಚೆಲುವೆ!ತನ್ನ ಮೇಲೆ ಇರುವ ಬೋಲ್ಡ್ ಸ್ಟಾರ್ ಅನ್ನುವ ಅಪಖ್ಯಾತಿ ದೂರ ಮಾಡಲು ಸನ್ನಿ ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾಳೆ ಎನ್ನುವುದು ಸದ್ಯದ ನ್ಯೂಸ್. ಸನ್ನಿಯ ಈ ಪ್ರಯತ್ನ ಫಲ ನೀಡುತ್ತದೆಯೇ?

ವೆಬ್ದುನಿಯಾವನ್ನು ಓದಿ