ಪವರ್ ಸ್ಟಾರ್ ಪವನ್ ಕಲ್ಯಾಣ್ ಮೂರನೆಯ ಮದುವೆ ಬಗ್ಗೆ ಎದ್ದ ಗುಲ್ಲು - ಊಹೆಗಳು ಆಧಾರಗಳು ಮತ್ತು ಸಾಕ್ಷಿಗಳು ಎಲ್ಲವೂ ಸುಳ್ಳು ಎಂದು ಹೇಳುತ್ತಿದ್ದಾರೆ ಸಿನಿ ಮಂದಿ. ಕಾರಣ ಇಷ್ಟೇ ತೆಲುಗು ಚಿತ್ರರಂಗದಲ್ಲಿ ಈಗ ಪವನ್ ಕಲ್ಯಾಣ್ ಅವರ ತಾರಾ ಬದುಕು ಯಶಸ್ವಿಯಾಗಿ ಮುಂದುವರೆಯುತ್ತಿದೆ. ಅವರ ಬೆಳವಣಿಗೆ- ಏಳಿಗೆ ಸಹಿಸದ ಅನೇಕರು ಮಾಡಿದ ಹುನ್ನಾರ ಇದು ಎಂದು ಹೇಳುತ್ತಿದ್ದಾರೆ ಟಾಲಿವುಡ್ ಮಂದಿ.
ಆತ ರಷ್ಯನ್ ತಾರೆ ಡೊನ್ನಾ ಮಾರ್ಕ್ ಜೊತೆ ಮದುವೆ ಆಗಿದ್ದಾರೆ. ಕೆಲವು ವರ್ಷಗಳಿಂದ ಅವರು ಒಟ್ಟಿಗೆ ಬದುಕುತ್ತಿದ್ದಾರೆ. ಅವರಿಗೆ ಒಂದು ಮಗುವು ಇದೆ ಎನ್ನುವ ಊಹೆಗಳು ಶುದ್ಧ ಸುಳ್ಳು. ಟೀವಿಯಲ್ಲಿ, ಅದರಲ್ಲೂ ಮಾಧ್ಯಮಗಳ ಪ್ರಚಾರವು ನೂರಕ್ಕೆ ನೂರು ಸುಳ್ಳು ಎನ್ನುವುದು ಬಹುತೇಕ ಸಾಬೀತಾಗಿದೆ.