ವಯಸ್ಕ ಚಿತ್ರಗಳಲ್ಲಿ ನಟಿಸುತ್ತ ಎಲ್ಲರ ಗಮನ ಸೆಳೆದ ನಟಿ ಸನ್ನಿ ಲಿಯೋನ್ . ಆ ಬಳಿಕ ಬಾಲಿವುಡ್ ಗೆ ಬಂದು ತನ್ನ ಪ್ರತಿಭೆಯನ್ನು ಇಲ್ಲಿಯೂ ತೋರುತ್ತಾ ವಯಸ್ಕ ಉತ್ತೇಜಕ ಚಿತ್ರಗಳಿಗೆ ಬೈ ಹೇಳಿದ್ದು ಹಳೆಯ ಕಥೆ.
ಈಗ ಆಕೆ ಏನೇ ಬಿಚ್ಚಿದರು ಅದಕ್ಕೊಂದು ಲಿಮಿಟ್ ಇದೆ. ನಿನ್ನೆ ಆಕೆಯ ಬಹು ನಿರೀಕ್ಷಿತ ರಾಗಿಣಿ ಎಮೆಮೆಸ್ ಚಿತ್ರ ಬಿಡುಗಡೆ ಆಯ್ತು. ಅದರ ಸೆಲೆಬ್ರೆಶನ್ ನ್ನು ಬೆಂಗಳೂರಲ್ಲಿ ಆಕೆ ಮಾಡಲು ನಿರ್ಧರಿಸಿದ್ದಾಳೆ. ಇಂದು ರಾತ್ರಿ ಸನ್ನಿ ಬೆಂಗಳೂರಲ್ಲಿ ಅದರ ಸಂಭ್ರಮದ ಖುಷಿಯನ್ನು ರಾಯಲ್ ಆರ್ಕಿಡ್ ನಲ್ಲಿ ತನ್ನ ಅಭಿಮಾನಿಗಳ ಜೊತೆಯಲ್ಲಿ ಆಚರಿಸುತ್ತಿದ್ದಾಳೆ.
ಈ ಚಿತ್ರವೂ ಹಾರರ್ ಮತ್ತು ಸೆಕ್ಸ್ ಎನ್ನುವ ಎರಡು ಉತ್ತೇಜಕ ಸಂಗತಿಗಳನ್ನು ಹೊಂದಿದೆ. ಅಗತ್ಯಕ್ಕಿಂತ ಹೆಚ್ಚಿನ ದೇಹ ಸಿರಿಯನ್ನು ತೋರಿಸಿರುವ ಸನ್ನಿ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾಳೆ.
ಆಕೆಗೆ ಭಾರತದಲ್ಲಿ ನಂಬರ್ ಒನ್ ಐಟಂ ಗರ್ಲ್ ಆಗುವ ತವಕ, ಅದಕ್ಕೆ ಪೂರಕವಾದ ಕೆಲಸಗಳನ್ನು ಸಹ ಮಾಡುತ್ತಿದ್ದಾಳೆ. ಒಟ್ಟಾರೆ ಬಾಲಿವುಡ್ ನೀಲಿ ನೀಲಿಯಾಗಿ ಕಾಣುತ್ತಿದೆ ಚಿತ್ರ ರಸಿಕರಿಗೆ! ಎಲ್ಲಾ ಸನ್ನಿ ಮಹಿಮೆ ...