ಮತ್ತೆ ಒಟ್ಟಿಗೆ ನಟಿಸ್ತಾರಾ ಸಲ್ಮಾನ್-ಶಾರೂಖ್ ಖಾನ್?

ಶುಕ್ರವಾರ, 3 ಜನವರಿ 2014 (12:04 IST)
PR
ಬಾಲಿವುಡ್ ಮುವ್ವರು ಖಾನ್ ಗಳ ಆಡಳಿತದಲ್ಲಿ ಇದೆ. ಸಲ್ಮಾನ್. ಶಾರುಖ್ ಮತ್ತು ಅಮೀರ್ ಖಾನ್ ಈ ಮುವ್ವರು ಖಾನ್ ಗಳು ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಆದರೆ ಅಮೀರ್ ಮತ್ತು ಸಲ್ಮಾನ್ ನಡುವೆ ಬಾಂಧವ್ಯ ಹಾಗೆ ಉಳಿದಿದ್ದರು ಕತ್ರಿನಾ ಕೈಫ್ ಳ ಕಾರಣದಿಂದ ಶಾರುಖ್ ಮತ್ತು ಸಲ್ಮಾನ್ ಖಾನ್ ನಡುವೆ ವೈರತ್ವ ಹೆಚ್ಚಾಯಿತು. ಇದರ ಪರಿಣಾಮ ಇವರಿಬ್ಬರಲ್ಲಿ ದ್ವೇಷ ಹೊತ್ತಿ ಉರಿಯಿತು . ಆದರೆ ಇತ್ತೀಚೆಗೆ ಇಫ್ತಾರ್ ನ ಮೂಲಕ ಇಬ್ಬರು ಮತ್ತೆ ಒಂದಾದರು.

ಅದಾದ ಬಳಿಕ ಇವರಿಬ್ಬರು ಒಟ್ಟಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕಿ ಫರಾ ಖಾನ್ ಇವರಿಬ್ಬರು ಒಟ್ಟಾಗಿ ನರ್ತಿಸುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅವರ ನಿರ್ದೇಶನ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಈ ಜೋಡಿ ಹಾಡೊಂದರಲ್ಲಿ ಒಟ್ಟಾಗಿ ನಟಿಸಲಿ ಎನ್ನುವ ಆಶಯ ಈಕೆಯದ್ದಾಗಿದೆ . ಇದಕ್ಕೆ ಸಂಬಂಧಿಸಿದಂತೆ ಪ್ರಯತ್ನಗಳು ಸಾಗಿವೆ. ಕರಣ್ ಅರ್ಜುನ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಮತ್ತೆ ಒಂದಾಗಿ ನಟಿಸುವ ಸಾಧ್ಯತೆ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರ ಸದ್ಯದಲ್ಲೇ ಸಿಗುವ ಸಾಧ್ಯತೆ ಇದೆ. ಈ ಸಂಗತಿ ಇವರಿಬ್ಬರ ಅಭಿಮಾನಿಗಳಲ್ಲಿ ಖುಷಿ ತಂದಿದೆಯಂತೆ !

ವೆಬ್ದುನಿಯಾವನ್ನು ಓದಿ