ಮತ್ತೊಂದು ರಿಯಾಲಿಟಿ ಶೋನಲ್ಲಿ ಸಲ್ಮಾನ್ ಖಾನ್

ಮಂಗಳವಾರ, 7 ಜನವರಿ 2014 (12:20 IST)
PR
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೆ ಕಿರುತೆರೆಗೆ ಹಿಂತಿರುಗಲಿದ್ದಾರೆ. ಬಾಲಿವುಡ್ ನ್ನು ಆಳುತ್ತಿರುವ ಈ ಕಲಾವಿದ ಬಿಗ್ ಬಾಸ್ ರಿಯಾಲಿಟಿ ಶೋ ಮುಖಾಂತರ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡರು. ಅವರೀಗ ನಾಲ್ಕು ಬಾರಿ ಈ ರಿಯಾಲಿಟಿ ಶೋನ ಭಾಗವಾಗಿದ್ದಾರೆ. ಈಗ ಸಲ್ಮಾನ್ ಅವರು ಮುಂದಿನ ವರ್ಷ ಹೊಸದಾದ ರಿಯಾಲಿಟಿ ಷೋ ನಡೆಸಲು ಸಿದ್ಧರಾಗುತ್ತಿದ್ದಾರೆ. ಅದು ಸಾಮಾಜಿಕ ಅಂಶಗಳನ್ನು ಒಳಗೊಂಡ ಸಂಗತಿಗಳಿಂದ ಇರುತ್ತದೆ . ಹಾಗೆಂದು ಅಮೀರ್ ಖಾನ್ ಅವರು ನಡೆಸಿ ಕೊಟ್ಟ ಬಹು ವಿವಾದಿತ ರಿಯಾಲಿಟಿ ಷೋ ಸತ್ಯಮೇವ ಜಯತೆಯಂತೆ ಇರುವುದಿಲ್ಲ.

ನಾವು ತುಂಬಾ ವಿಶೇಷವಾದ ರೀತಿಯಲ್ಲಿ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ.ಇದರಲ್ಲಿ ಮನರಂಜನೆಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ ಸಲ್ಮಾನ್ ಖಾನ್
ನಲವತ್ತೆಂಟರ ಹರೆಯ ಈ ನಟ ದಾಸ್ ಕ ದಂ ಅನ್ನುವ ಹೆಸರಿನ ರಿಯಾಲಿಟಿ ಷೋ ಭಾಗವಾಗಲಿದ್ದಾರೆ. ಇದೊಂದು ನವನವೀನವಾದ ಷೋ ಇದರಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸುತ್ತಾ ಈ ಕಾರ್ಯಕ್ರಮ ಖಂಡಿತವಾಗಿ ಅನೇಕ ಬಗೆಯ ಬದಲಾವಣೆಗಳನ್ನು ತರುತ್ತದೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ ಸಲ್ಮಾನ್ ಖಾನ್ . ಪ್ರಸ್ತುತ ಅವರು ಜೈ ಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವೂ 24 ಕ್ಕೆ ಬಿಡುಗಡೆ ಆಗಲಿದೆ .

ವೆಬ್ದುನಿಯಾವನ್ನು ಓದಿ