ಲಕ್ಷ್ಮಿ ರೈ ತೂಕ ಮೈ ಕರಗಿಸಿಕೊಂಡಿದ್ದಾಳೆ .... ಎಷ್ಟು ಕೆಜಿ ಗೊತ್ತೇ ?

ಸೋಮವಾರ, 14 ಏಪ್ರಿಲ್ 2014 (12:02 IST)
PR
ಕನ್ನಡ ಅತಿ ಚೆಲುವೆಯರಲ್ಲಿ ಲಕ್ಷ್ಮಿ ರೈ ಸಹ ಒಬ್ಬಳು. ತನ್ನ ರೂಪ ಮತ್ತು ಮಾದಕತೆಯ ಜೊತೆಗೆ ಕ್ರಿಕೆಟರ್ ಜೊತೆಗಿನ ಸ್ನೇಹದಿಂದ ಸಹ ಆಕೆ ಹೆಚ್ಚು ಜನಪ್ರಿಯಳಾದಳು. ಕನ್ನಡ, ತಮಿಳು, ತೆಲುಗು , ಮಲೆಯಾಳಂ ಹೀಗೆ ಎಲ್ಲ ಭಾಷೆಗಳಲ್ಲೂ ಸಹಿತ ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಪ್ರಯತ್ನ ಪಟ್ಟರೂ ಸಹ ಅದ್ಯಾಕೋ ಅದೃಷ್ಟ ಆಕೆಯ ಕೈ ಹಿಡಿಯಲೇ ಇಲ್ಲ.

ಆಕೆ ರೂಪದಲ್ಲಿ ಯಾವ ರೀತಿಯಿಂದಲೂ ಕಡಿಮೆಯಿಲ್ಲ. ಪ್ರತಿಭಾವಂತೆ ಆದರೆ ಇನ್ನು ಅವಕಾಶಗಳಿಗಾಗಿ ಕಾಯ್ತಾನೆ ಇದ್ದಾಳೆ.

ತೆಲುಗು ಚಿತ್ರರಂಗದಲ್ಲಿ ಆಕೆಗೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಎಂದು ಮಾಧ್ಯಮಗಳು ಬರೆದಿದ್ದವು. ರವಿತೇಜ ಚಿತ್ರದಲ್ಲಿ ಆಕೆ ನಟಿಸಿ ಐಟಂ ನಂತರ ಸಿನಿಮಾದಲ್ಲಿ ಕಾಣಿಸಲೇ ಇಲ್ಲ, ಬದಲಿಗೆ ಕ್ರಿಕೆಟರ್ ಶ್ರೀಶಾಂತ್ ಜೊತೆ ಕಂಡು ಬಂದಳು.

PR
ಇವೆಲ್ಲ ಹಳೆಯ ಕಹಾನಿ, ಈಗ ಹೇಳುವುದೇನೆಂದರೆ, ಆಕೆ ತನಗೆ ಸಿಕ್ಕ ತಮಿಳು ಚಿತ್ರಕ್ಕೆಂದು ಸುಮಾರು ಹದಿನೈದು ಕೆಜಿಗಳಷ್ಟು ತೂಕ ಕಡಿಮೆ ಮಾಡಿಕೊಂಡಿದ್ದಾಳಂತೆ. ಅದು ಕೇವಲ ಎರಡು ತಿಂಗಳಲ್ಲಿ ಇಂತಹ ಸಾಹಸಕ್ಕೆ ಕೈ ಹಾಕಿದ್ದಾಳೆ ಆಕೆ.

ನಿರ್ದೇಶಕರು ಹೇಳಿದಂತೆ ತಯಾರಾದ ಲಕ್ಷ್ಮಿ ರೈ ಕಂಡು ಖುದ್ದು ಆ ಡೈರೆಕ್ಟರ್ ದಂಗಾಗಿ ಹೋದನಂತೆ. ಈಗ ಲಕ್ಷ್ಮಿಗೆ ಸಣ್ಣಗೆ ಆದ ಕಾರಣ ಇನ್ನು ಮುಂದಾದರೂ ಅವಕಾಶಗಳು ಸಿಗುತ್ತಾ ಅನ್ನೋದನ್ನು ಕಾದು ನೋಡ ಬೇಕು..

ವೆಬ್ದುನಿಯಾವನ್ನು ಓದಿ