ಭಾರತದ ಅಪರೂಪದ ನಟ ಕಮಲಾ ಹಾಸನ್ . ಅವರ ಮಗಳು ಶೃತಿ ಹಾಸನ್ ಎನ್ನುವುದು ಎಲ್ಲರಿಗು ತಿಳಿದೇ ಇದೆ . ಈತ್ತೀಚೆಗೆ ಆಕೆಗೆ ಅದೃಷ್ಟವೇ ಸರಿಯಾಗಿಲ. ವೃತ್ತಿಯಲ್ಲಿ ಅಂತಹ ಲಕ್ ಇಲ್ಲದೆ ಇದ್ದಾಗ ಒಳ್ಳೆಯ ಚಿತ್ರಗಳು ಕೈ ಸೇರಿ ಆಕೆಗೆ ಉತ್ತಮ ಅವಕಾಶಗಳನ್ನು ನೀಡಿ ಈಗ ಟಾಲಿವುಡ್ , ಬಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಒಂದು ಒಳ್ಳೆಯ ಸ್ಥಾನ ಪಡೆಯುವಂತಾಗಿದೆ. ಈ ಮಧ್ಯೆ ಕಳೆದ ವರ್ಷ ಒಬ್ಬ ಯುವಕ ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ್ದ. ಅದೃಷ್ಟವಶಾತ್ ಆಕೆಗೇನು ತೊಂದರೆ ಆಗಲಿಲ್ಲ.
ಈಗ ಮತ್ತೊಮ್ಮೆ ಅನಾರೋಗ್ಯಕ್ಕೆ ಗುರಿ ಆಗಿದ್ದಾಳೆ ಶೃತಿ . ರಾಮ್ ಚರಣ್ ಅವರ ಸಿನಿಮದ ಶೂಟಿಂಗ್ ನಲ್ಲಿ ಮಗ್ನರಾಗಿದ್ದಾಗ ಆಕೆಯು ಹೊಟ್ಟೆ ನೋವಿನಿದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆಯ ಆರೋಗ್ಯದ ಬಗ್ಗೆ ಅನೇಕ ಕಟ್ಟು ಕಥೆಗಳು ಓಡಾಡುತ್ತಿವೆ. ಈಗ ಬಂದಿರುವ ವರದಿ ಅನ್ವಯ ಶೃತಿಗೆ ಅಪೆಂಡಿ ಸೈಟಿಸ್. ಆದರೆ ಅದು ಅಧಿಕೃತವಾಗಿ ತಿಳಿಯದ ಸಂಗತಿ ಆಗಿದೆ. ಅಂದರೆ ವೈದ್ಯರು ಇದನ್ನು ಸ್ಪಷ್ಟಪಡಿಸಿಲ್ಲ . ಇದರಿಂದ ಮತ್ತೆ ಟಾಲಿವುಡ್ ಮಂದಿ ಆಕೆಯ ಅನಾರೋಗ್ಯದ ಬಗ್ಗೆ ತಮಗೆ ತೋಚಿದ್ದು ಹೇಳುತ್ತಿದ್ದಾರೆ. ಶೃತಿ ಆಸ್ಪತ್ರೆಯಿಂದ ಹೊರ ಬಂದ ಬಳಿಕ ಅಲ್ಲೂ ಅರ್ಜುನ್ ಅವರ ರೇಸುಗುರ್ರಂ ಚಿತ್ರದಲ್ಲೂ ನಟಿಸ ಬೇಕಾಗಿದೆ. ಅವಕಾಶಗಳಿವೆ .. ಆದರೆ ಪಾಪ ಆರೋಗ್ಯವಿಲ್ಲ.. ವಿಧಿಯಾಟ !