ಸಲ್ಮಾನ್ ಐ ಲವ್ ಯೂ ಬಿ ಕಾಸ್ ಐ ಯಾಂ ವರ್ಜಿನ್ ಅಂದ್ಲು ರಾಖಿ
ಸೋಮವಾರ, 31 ಮಾರ್ಚ್ 2014 (19:40 IST)
ಬಾಲಿವುಡ್ ಮಾತ್ರವಲ್ಲ ಇಡಿ ಮಾಧ್ಯಮ ಲೋಕದಲ್ಲಿ ಹಂಗಾಮ ಎಬ್ಬಿಸಿರುವ ಸಂಗತಿ ಎಂದರೇ ಸಲ್ಮಾನ್ ಖಾನ್ ಅವರ ಮನದಾಳದ ಮಾತುಗಳು. ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಕಾಫಿ ವಿತ್ ಕರಣ್ ಕಾರ್ಯಕ್ರಮಲ್ಲಿಭಾಗವಹಿಸಿದ್ದರು. ಆಗ ಸಲ್ಮಾನ್ ಖಾನ್ ಆಡಿದ ಮಾತುಗಳು ಇಡೀ ಜನತೆ ಅವರತ್ತ ಮತ್ತೇ ಮತ್ತೇ ತಿರುಗಿ ನೋಡುವಂತೆ ಮಾಡಿದೆ. ತಾನಿನ್ನೂ ವರ್ಜಿನ್ . ಯಾವುದೇ ಹುಡುಗಿಯ ಜೊತೆಯಲ್ಲಿಯೂ ಸೆಕ್ಸ್ ನಲ್ಲಿ ಪಾಲ್ಗೊಂಡಿಲ್ಲ, ನನ್ನ ಹುಡುಗಿಗೆ ನಾನು ಮೀಸಲಿದ್ದೇನೆ ಎನ್ನುವ ಮಾತುಗಳು ಸಾಕಷ್ಟು ಚರ್ಚೆ ಉಂಟು ಮಾಡಿತ್ತು.
ಇದರ ಬಗ್ಗೆ ರಾಖಿ ಸಾವಂತ್ ಕಮೆಂಟ್ ಮಾಡಿದ್ದಾಳೆ. ಬಾಲಿವುಡ್ ನಲ್ಲಿ ಏನಾದರೊಂದು ಗಲಾಟೆ ಮಾಡುತ್ತ ಸದಾ ಸುದ್ದಿಯಲ್ಲಿರುವ ಈ ಐಟಂ ಗರ್ಲ್ ಈಗ ಸಲ್ಮಾನ್ ಖಾನ್ ಗೆ ಎದಿರೇಟು ಕೊಡಲು ನಿರ್ಧರಿಸಿದ್ದಾಳೆ.ನೀನು ವರ್ಜಿನ್ ಆದರೆ ನಾನು ಸಹ ವರ್ಜಿನ್ . ಐ ಲವ್ ಯೂ ಸಲ್ಮಾನ್ ಎಂದು ಹೇಳಿ ಆತನ ಬಗ್ಗೆ ವ್ಯಂಗ್ಯವಾಡಿದ್ದಾಳೆ.
ಆತನ ವೈಯುಕ್ತಿಕ ಬದುಕಿನ ಬಗ್ಗೆ ಈಗ ರಾಖಿ ಸಾವಂತ್ ಚಿಂತೆ ಮಾಡುತ್ತಿರುವುದು ಕಂಡರೆ ಮತ್ತೆ ತನ್ನ ಪಾಪ್ಯುಲಾರಿಟಿ ಹೆಚ್ಚಿಸಿಕೊಳ್ಳಲು ಈ ರೀತಿಯ ಆಟ ಆರಂಭಿಸಿದ್ದಾಳೆ ಎಂದು ಬಿಟೌನ್ ಮಂದಿ ಕುಹಕವಾಡುತ್ತಿದ್ದಾರೆ. ರಾಖಿನೇ ಹಾಗೆ ಅವಳಿದ್ದ ಕಡೆ ಗಲಾಟೆ ಗದ್ದಲ ಇರಲೇ ಬೇಕಲ್ವಾ?