ಸಲ್ಮಾನ್ ಖಾನ್ ಗೆ ಕೋಟಿ ಕ್ಲಬ್ ಮೆಂಬರ್ ಆಗೋಕೆ ಆಸಕ್ತಿ ಇಲ್ಲವಂತೆ

ಶುಕ್ರವಾರ, 10 ಜನವರಿ 2014 (11:00 IST)
PR
ಬಾಲಿವುಡ್ ನ ಮಿ. ಫರ್ಫೆಕ್ಟ್ ಅಮೀರ್ ಖಾನ್, ಅವರು ಚಿತ್ರಕ್ಕಾಗಿ ಸಾಕಷ್ಟು
ಹೋಂವರ್ಕ್ ಮಾಡಿರುತ್ತಾರೆ. ಆದ ಕಾರಣ ಅವರ ಚಿತ್ರಗಳು ಬಾಕ್ಸಾಫೀಸಲ್ಲಿ ಸೋತಿಲ್ಲ. ಗಜನಿ ಚಿತ್ರ ಅನೇಕ ದಾಖಲೆಗಳನ್ನು ನಿರ್ಮಿಸಿತು. ಅದೇ ರೀತಿ ಧೂಂ3 ಸಹ ಅತ್ಯುತ್ತಮ ದಾಖಲೆಗಳನ್ನು ನಿರ್ಮಿಸಿ ಎಲ್ಲರ ಗಮನ ಸೆಳೆಯಿತು. ವಿಶ್ವ ಮಾರುಕಟ್ಟೆಯಲ್ಲಿ ತನಗೊಂದು ಸ್ಥಾನ ಪಡೆದುದಲ್ಲದೇ ಮತ್ತೇ ಭಾರತದಬಾಕ್ಸಾಫೀಸಲ್ಲೂ ದಾಖಲೆ ನಿರ್ಮಿಸಿತು.

ಅದು ಸುಮಾರು 500 ಕೋಟಿಗಳಷ್ಟು ಗಳಿಕೆ ಮಾಡಿ ತನ್ನದೊಂದು ವಿಶೇಷ ದಾಖಲೆ ಭಾರತೀಯ ಚಿತ್ರರಂಗದಲ್ಲಿ ಬರೆಯಿತು.ಇವೆಲ್ಲ ಅಮೀರ್ ಖಾನ್ ಸಿನಿಮಾಗೆ ಸಂಬಂಧ ಪಟ್ಟ ಸಂಗತಿ, ಆದರೆ ಈಗ ಸುದ್ದಿಯಲ್ಲಿರುವ ಚಿತ್ರ ಸಲ್ಮಾನ್ ಖಾನ್ ಅವರ ಜೈ ಹೊ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಸಲ್ಮಾನ್ ಎಲ್ಲರ ಮೆಚ್ಚಿನ ನಟ, ಅಹಾಕಿದ ದುಡ್ಡಿಗೆ ಮೋಸವಾಗಿಲ್ಲ ನಿರ್ಮಾಪಕರಿಗೆ . ಅದೇರೀತಿ ಸಲ್ಮಾನ್ ಸಹ ಹೇಳೋದಿಷ್ಟೇ, ತಾನು ತನ್ನ ಚಿತ್ರದ ಯಶಸ್ಸು ಬಾಕ್ಸಾಫೀಸಿನ ಮೇಲೆ ಆಧಾರಿತವಾಗಿರುವುದಿಲ್ಲ. ಜನರಿಗೆ ಇಷ್ಟ ಆದರೆ ಸಾಕು.

ನನ್ನ ಗಮನ ಬಾಕ್ಸಾಫೀಸಿನ ಮೇಲೆ ಕೇಂದ್ರೀಕೃತ ಆಗಿಲ್ಲ ಅನ್ನುವ ಮಾತು ಹೇಳಿದ್ದಾರೆ. ಬಾಲಿವುಡ್ ನ ಎಲ್ಲರ ಗಮನ ಬಾಕ್ಸಾಫೀಸಿನ ಕಡೆಗೆ 100 -200 ಕೋಟಿ ರೂಗಳ ಕ್ಲಬ್ಗಳು ನನಗೆ ಆಸಕ್ತಿ ತಂದಿರುವ ಸಂಗತಿಯಾಗಿಲ್ಲ ಎನ್ನುವ ಮಾತನ್ನು ನೇರವಾಗಿ ಹೇಳಿದ್ದಾರೆ ಅವರು. ಆದರೆ ಈಗಾಗಲೇ ಭಾರತೀಯ ಚಿತ್ರರಂಗವು ಕೇಳದ ಕಾಣದ ರೆಕಾರ್ಡ್ ಮಾಡಿದೆ ಧೂಮ್ 3 ಸ್ಟಾಲಿನ್ ಚಿತ್ರಾ ರೀಮೇಕ್ ಆಗುತ್ತಿರುವ ಜೈ ಹೊ ಆ ಮಟ್ಟದ ಯಶಸ್ಸು ಗಳಿಸಲು ಅಸಾಧ್ಯ ಅನ್ನುವ ನಂಬಿಕೆ ಹೊಂದಿರುವ ಸಲ್ಮಾನ್ ಇಂತಹ ಸ್ಟೇಟ್ ಮೆಂಟ್ಸ್ ಕೊಡ್ತಾ ಇದ್ದಾರೆ ಅನ್ನುವುದು ಬಾಲಿವುಡ್ ಮಂದಿಯ ಸಣ್ಣ ಎಳೆಯ ಹಾಸ್ಯವಾಗಿದೆ ಸಲ್ಮಾನ್ ಬಗ್ಗೆ !

ವೆಬ್ದುನಿಯಾವನ್ನು ಓದಿ