ಈ ಪಾತ್ರಕ್ಕೆ ಅವರ ಕಡೆಯಿಂದ ಸಮ್ಮತಿ ಮುದ್ರೆ ಸಿಕ್ಕಿದೆ. ಇದು ವೀಕ್ಷಕರಿಗೆ ಅತಿಯಾದ ಥ್ರಿಲ್ ನೀಡುವಂತಹ ಕಥಾ ಹಂದರ ಹೊಂದಿಲ್ಲ, ಆದರೆ ಆ ಚಿತ್ರದಲ್ಲಿರುವ ಹಾಸ್ಯಭರಿತ ಅಂಶಗಳು ಜನರ ಗಮನ ಸೆಳೆಯುತ್ತದೆ ಎನ್ನುವ ಮಾತನ್ನು ಚಿತ್ರತಂಡ ಹೇಳಿದೆ. ಇದನ್ನು ಅಬ್ಬಾಸ್ ಅವರು ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಅರ್ಬಾಸ್ ಅವರ ಜೊತೆ ಮಾತುಕತೆ ಆಗಿದ್ದು, ಚಿತ್ರದ ಕಥೆಯನ್ನು ಅರ್ಬಾಸ್ ಬಳಿ ಚರ್ಚಿಸಿದ್ದಾರಂತೆ ನಿರ್ದೇಶಕರು. ಇದರಲ್ಲಿ ಅರ್ಬಾಸ್ ಡಾನ್ ಪಾತ್ರ ಮಾಡುತ್ತಿದ್ದಾರೆ. ಈ ಮೊದಲು ನಟಿಸಿರುವ ಚಿತ್ರಗಳಿಗಿಂತ ಭಿನ್ನ ಪಾತ್ರ ತಮಗೆ ಸಿಕ್ಕಿರುವ ಬಗ್ಗೆ ಖುಷಿಯಾಗಿದ್ದಾರೆ ಅರ್ಬಾಸ್. ಭಿನ್ನರೀತಿಯ ಖಳ ಪಾತ್ರ ಆದ ಕಾರಣ ಜನರಿಗೆ ಹೆಚ್ಚು ಆಸಕ್ತಿ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ ಆ ಚಿತ್ರದ ಮಂದಿ.