ಪುಲಿ ಚಿತ್ರದ ಒಂದು ಹಾಡಿಗೆ ವೆಚ್ಚವಾದ ಮೊತ್ತ 5 ಕೋಟಿ ರೂಪಾಯಿಗಳು

ಗುರುವಾರ, 16 ಏಪ್ರಿಲ್ 2015 (11:14 IST)
ಕತ್ತಿಯಂತಹ ಯಶಸ್ವಿ ಚಿತ್ರ ನೀಡಿದ ಶಿಂಬುದೇವನ್ ಈಗ ಪುಲಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಎಸ್ ಕೆ ಟಿ  ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವು ನಿರ್ಮಾಣವಾಗುತ್ತಿದೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವ ಈ ಚಿತ್ರ ಫಾಸ್ಟ್ ಲುಕ್, ಸಿನಿಮಾ  ಸ್ಟಿಲ್ಸ್ ಈವರೆಗೂ ಹೊರ ಬಂದಿಲ್ಲ, ಅಷ್ಟರ ಮಟ್ಟಿಗೆ ಆ ಚಿತ್ರದ ಬಗ್ಗೆ ಗುಟ್ಟಾಗಿಟ್ಟಿದ್ದಾರೆ ಚಿತ್ರತಂಡದವರು .  

ಆದರೆ ಈ ಚಿತ್ರಕ್ಕೆ ಸಂಬಂಧಪಟ್ಟ ಕೆಲವು ಆಸಕ್ತಿಕರ ಸಂಗತಿಗಳು ಹೊರ ಬಂದಿವೆ. ಚೆನ್ನರು, ಕೇರಳದ ಸುಂದರವಾದ ಸ್ಥಳಗಳಲ್ಲಿ  ಶೂಟಿಂಗ್ ಪೂರ್ಣಮಾಡಿರುವ ಚಿತ್ರತಂಡ, ಈಗ ತಿರುಪತಿ ಸಮೀಪ ಇರುವ ತಲಕೊನ ಕಾಡಿಗೆ ಶಿಫ್ಟ್ ಆಗಿದ್ದಾರೆ. ದಟ್ಟವಾದ ಅರಣ್ಯವಾದ ಕಾರಣ ಅಲ್ಲಿ ರಸ್ತೆಗಳು ಸರಿಯಾಗಿಲ್ಲ. 
 
ಆದರೆ ಚಿತ್ರದ ಶೂಟಿಂಗ್‌ಗೆಂದು ಚಿತ್ರತಂಡ ಅಲ್ಲಿ  ಸೇತುವೆ, ರಸ್ತೆ ನಿರ್ಮಾಣ ಮಾಡಿದ್ದಾರೆ. ಆ ಕಾಡಿನಲ್ಲಿ 200 ಮಂದಿ ಕಾರ್ಪೆಂಟರ್ಗಳು, 100 ಮಂದಿ ಮೌಲ್ಡ್ ಮಾಡುವವರು, 50 ಜನ ವೆಲ್ಡರ್ ಗಳು, ನೂರು ದಿನಗಳ ಕಾಲ ನಿರಂತರವಾಗಿ ಹಗಲು ರಾತ್ರಿ ಎನ್ನದೆ ಒಂದು ಹಳ್ಳಿಯ ಸೆಟ್ ಸಿದ್ಧ ಮಾಡಿದ್ದಾರೆ.
 
ಅದು ನಿಜವಾದ ಹಳ್ಳಿಯೇನೋ ಎನ್ನುವ ಭ್ರಮೆ ಹುಟ್ಟಿಸುವಂತೆ. ಅಷ್ಟೊಂದು ಸುಂದರವಾಗಿ ತಯಾರು ಮಾಡಿದ್ದಾರೆ. ಆ ಸೆಟ್ ನೋಡಿ ಸಿನಿತಂಡ ದಂಗಾಗಿ ಹೋದರಂತೆ. ಈ ಸೆಟ್‌ನಲ್ಲಿ  ಹೀರೋ ಇಂಟ್ರಡಕ್ಷನ್ ಹಾಡನ್ನು ಚಿತ್ರೀಕರಣ ಮಾಡುತ್ತಿದ್ದಾರೆ. ಇದರಲ್ಲಿ ವಿಜಯ್ ಜೊತೆ ಶ್ರುತಿ ಹಾಸನ್, ಪ್ರಭು, ತಂಬಿ ರಾಮಯ್ಯ, ಸತ್ಯನ್ , ಜೂನಿಯರ್ ಬಾಲಯ್ಯ, ನರೇನ್, ಜೆ ಮಲ್ಲೂರಿ, ಮಧುಮಿತ, ಅಂಜಲಿದೇವಿ , ಗಾಯತ್ರಿ ಮುಂತಾದವರು ಸಹಿತ ಭಾಗವಹಿಸಿದ್ದಾರೆ. ಈ ಹಾಡನ್ನು ಶ್ರೀಧರ್ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. 
 
ಆ ಹಾಡು ಹಬ್ಬದ ವಾತಾವರಣವನ್ನು ನೀಡುವಂತೆ ಅದ್ಧೂರಿಯಾಗಿ ಚಿತ್ರೀಕರಿಸಲಾಗುತ್ತಿದೆಯಂತೆ. ಈ ಹಾಡಿನಲ್ಲಿ 300ಮಂದಿ ಜೂನಿಯರ್ ಆರ್ಟಿಸ್ಟ್‌ಗಳಿದ್ದು, ಮುಂಬೈ, ಚೆನ್ನರು, ಆಂಧ್ರಪ್ರದೇಶ್, ತೆಲಂಗಾಣದ 200  ಮಂದಿ ಡ್ಯಾನ್ಸರ್‌ಗಳು ಸಹಿತ  ಭಾಗವಹಿಸಿದ್ದಾರಂತೆ. ಇದಕ್ಕೆ ಖರ್ಚಾಗುತ್ತಿರುವ ಮೊತ್ತ  5ಕೋಟಿ  20ಲಕ್ಷ ರೂಪಾಯಿಗಳು. 

ವೆಬ್ದುನಿಯಾವನ್ನು ಓದಿ