ರಜನಿಕಾಂತ್‌ ‘ಕಾಲಾ’ ಚಿತ್ರವನ್ನು ಫೇಸ್‌ ಬುಕ್‌ ಲೈವ್‌ ಮಾಡಿದ ಯುವಕ ಅರೆಸ್ಟ್

ಶುಕ್ರವಾರ, 8 ಜೂನ್ 2018 (14:18 IST)
ಸಿಂಗಾಪುರ : ಗುರುವಾರ ಬಿಡುಗಡೆಯಾದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಅಭಿನಯದ ಬಹುನಿರೀಕ್ಷಿತ ‘ಕಾಲಾ’ ಚಿತ್ರವನ್ನು ವೀಕ್ಷಿಸುತ್ತಾ ಫೇಸ್‌ ಬುಕ್‌ ಲೈವ್‌ ಮಾಡಿರುವ ಯುವಕನೊರ್ವನನ್ನು ಸಿಂಗಾಪುರ ಪೊಲೀಸರು ಬಂಧಿಸಿದ್ದಾರೆ.


ಪ್ರವೀಣ್‌ ಥೇವಾರ್‌ ಎಂಬಾತ ಚಿತ್ರಮಂದಿರದಲ್ಲಿ ಕಾಲಾ ಚಿತ್ರವನ್ನು ವೀಕ್ಷಿಸುತ್ತಿದ್ದ ವೇಳೆ 40 ನಿಮಿಷಗಳ ಕಾಲ  ಫೇಸ್‌ ಬುಕ್‌ ಲೈವ್‌ ಮಾಡಿದ್ದಾನೆ. ಇದನ್ನು ಗಮನಿಸಿದ ರಜನಿ ಅಭಿಮಾನಿಗಳು ಹಾಗೂ  ಚಿತ್ರತಂಡವರು ಕೂಡಲೇ ಸಿಂಗಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಲೈವನ್ನು 1200 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದ ಕಾರಣ ಚಿತ್ರ ತಂಡದ ಮನವಿಯ ಮೇರೆಗೆ ಈ ವಿಡಿಯೋವನ್ನು ಫೇಸ್‌ಬುಕ್‌ನಿಂದ ಡಿಲೀಟ್ ಮಾಡಲಾಗಿದೆ.


ಕಾಲಾ ಬಿಗ್‌ ಬಜೆಟ್‌ ಚಿತ್ರವಾಗಿರುವುದರಿಂದ ಚಿತ್ರದ ನಿರ್ಮಾಪಕ ರಜನೀಕಾಂತ್​ ಅಳಿಯ ನಟ ಧನುಷ್​ ಅವರು ಯಾವ ಚಿತ್ರರಸಿಕರು ಕೂಡ ಈ ಕೃತ್ಯಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ