ವಿಚ್ಛೇದನದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಅಮೀರ್ ಖಾನ್-ಕಿರಣ್ ರಾವ್
ನಮ್ಮ ನಿರ್ಧಾರ ಕೆಲವರಿಗೆ ಶಾಕ್, ಕೆಲವರಿಗೆ ಬೇಸರ ತಂದಿರಬಹುದು. ಆದರೆ ನಾವಿಬ್ಬರೂ ಆರಾಮವಾಗಿದ್ದೇವೆ. ನಾವು ಈಗಲೂ ಒಂದೇ ಕುಟುಂಬ. ಆದರೆ ನಮ್ಮ ಸಂಬಂಧ ಮಾತ್ರ ತುಸು ಬದಲಾಗಿದೆಯಷ್ಟೇ. ನಮ್ಮ ಫೌಂಡೇಷನ್ ಕೆಲಸ ನಮ್ಮ ಮಗ ಆಝಾದ್ ನಷ್ಟೇ ಆಪ್ತ. ಅದು ಮೊದಲಿನಂತೆಯೇ ಮುಂದುವರಿಯಲಿದೆ ಎಂದು ಅಮೀರ್-ಕಿರಣ್ ರಾವ್ ಹೇಳಿದ್ದಾರೆ.