ರೀನಾ ದತ್ತಾ, ಕಿರಣ್ ರಾವ್ ಇಬ್ಬರಿಗೂ 15 ವರ್ಷಕ್ಕೆ ವಿಚ್ಛೇದನ ಕೊಟ್ಟ ಅಮೀರ್ ಖಾನ್
ಭಾನುವಾರ, 4 ಜುಲೈ 2021 (09:40 IST)
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್-ಕಿರಣ್ ರಾವ್ ತಮ್ಮ ವೈವಾಹಿಕ ಜೀವನಕ್ಕೆ ವಿಚ್ಛೇದನ ನೀಡುವ ನಿರ್ಧಾರ ಮಾಡಿದ್ದಾರೆ.
ವಿಶೇಷವೆಂದರೆ ಮೊದಲ ಪತ್ನಿ ರೀನಾ ದತ್ತಾಗೂ ಅಮೀರ್ 16 ವರ್ಷ ಗಳ ದಾಂಪತ್ಯ ಜೀವನದ ಬಳಿಕ ವಿಚ್ಛೇದನ ನೀಡಿದ್ದರು. ಈಗ ಕಿರಣ್ ರಾವ್ ಜೊತೆಗಿನ ದಾಂಪತ್ಯವೂ ಹೆಚ್ಚು ಕಡಿಮೆ ಅಷ್ಟೇ ವರ್ಷದಲ್ಲಿ ಅಂತ್ಯವಾಗಿದೆ.
ವಿಚ್ಛೇದನವಾದರೂ ಇಬ್ಬರೂ ಸ್ನೇಹಿತರಾಗಿ ಮುಂದುವರಿಯುತ್ತಾರಂತೆ. ತಮ್ಮ ಮಗನನ್ನು ಜೊತೆಯಾಗಿ ನೋಡಿಕೊಳ್ಳುತ್ತಾರಂತೆ. ಜೊತೆಗೆ ತಮ್ಮ ಫೌಂಡೇಷನ್ ಕೆಲಸಗಳನ್ನೂ ಜೊತೆಯಾಗಿ ನಿಭಾಯಿಸಲಿದ್ದಾರೆ ಎಂದು ಘೋಷಿಸಿದ್ದಾರೆ.