ಲಾಲ್ ಸಿಂಗ್ ಛಡ್ಡಾಗೆ ಬಹಿಷ್ಕಾರದ ಭೀತಿ: ಅಮೀರ್ ಖಾನ್ ಹೇಳಿದ್ದೇನು?

ಮಂಗಳವಾರ, 2 ಆಗಸ್ಟ್ 2022 (09:00 IST)
ಮುಂಬೈ: ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಬಿಡುಗಡೆಗೂ ಮೊದಲೇ ನೆಟ್ಟಿಗರಿಂದ ಬಹಿಷ್ಕಾರದ ಭೀತಿ ಎದುರಿಸುತ್ತಿದೆ. ಇದೀಗ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾವೂ ಇದೇ ಭೀತಿಯಲ್ಲಿದೆ.

ಲಾಲ್ ಸಿಂಗ್ ಛಡ್ಡಾ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಆದರೆ ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹಲವರು ಲಾಲ್ ಸಿಂಗ್ ಛಡ್ಡಾಕ್ಕೆ ಬಹಿಷ್ಕಾರ ಹಾಕುತ್ತಿದ್ದಾರೆ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಈ ಹಿಂದೆ ಭಾರತದಲ್ಲಿ ಅಸುರಕ್ಷತೆಯ ವಾತಾವರಣವಿದೆ ಎಂದಿದ್ದರು.

ಇದೇ ವಿಚಾರವನ್ನಿಟ್ಟುಕೊಂಡು ಈಗ ಅಮೀರ್ ಖಾನ್ ಸಿನಿಮಾವನ್ನು ಬಹಿಷ್ಕರಿಸಿ ಎಂಬ ಅಭಿಯಾನ ಆರಂಭವಾಗಿದೆ. ಇದಕ್ಕೆ ಅಮೀರ್ ಪ್ರತಿಕ್ರಿಯಿಸಿದ್ದು, ಕೆಲವರು ನಾನು ಭಾರತ ವಿರೋಧಿ ಎಂದುಕೊಂಡಿದ್ದಾರೆ. ಇದು ನಿಜವಲ್ಲ. ಇದು ನನಗೆ ಬೇಸರವನ್ನುಂಟು ಮಾಡಿದೆ.  ನನ್ನ ಸಿನಿಮಾವನ್ನು ಬಹಿಷ್ಕರಿಸಿ, ನೋಡಿ ಪ್ರೋತ್ಸಾಹಿಸಿ’ ಎಂದು ಅಮೀರ್ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ