ಲಂಡನ್ ನಲ್ಲಿ ಭಾರತೀಯ ರೆಸ್ಟೋರೆಂಟ್ ನಲ್ಲಿ ಕೊಹ್ಲಿ ದಂಪತಿ ಊಟ: ಕೊಹ್ಲಿ ಗ್ರೇಟ್ ಎಂದ ಚೆಫ್

ಬುಧವಾರ, 27 ಜುಲೈ 2022 (09:50 IST)
ಲಂಡನ್: ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆದು ಇದೀಗ ಪತ್ನಿ ಅನುಷ್ಕಾ, ಮಗಳು ವಮಿಕಾ ಜೊತೆ ಲಂಡನ್ ನಲ್ಲಿ ರಜಾ ಮಜಾ ಮಾಡುತ್ತಿರುವ ವಿರಾಟ್ ಕೊಹ್ಲಿ ಭಾರತೀಯ ರೆಸ್ಟೋರೆಂಟ್ ಒಂದಕ್ಕೆ ಹೋಗಿ ಊಟ ಮಾಡಿಕೊಂಡು ಬಂದಿದ್ದು ಸುದ್ದಿಯಾಗಿದೆ.

ಕೊಹ್ಲಿ ದಂಪತಿ ಲಂಡನ್ ನ ತಮ್ಮ ಮೆಚ್ಚಿನ ಭಾರತೀಯ ರೆಸ್ಟೋರೆಂಟ್ ಗೆ ತೆರಳಿ ಡೈನ್ ಡೇಟ್ ಮಾಡಿದ್ದಾರೆ. ಬಳಿಕ ರೆಸ್ಟೋರೆಂಟ್ ಚೆಫ್ ಸುರೇಂದರ್ ಮೋಹನ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.

ಕೊಹ್ಲಿ ದಂಪತಿಯನ್ನು ಹೊಗಳಿರುವ ಸುರೇಂದರ್ ಮೋಹನ್‍ ‘ಕೊಹ್ಲಿ ದಂಪತಿ ಗ್ರೇಟ್. ಅವರು ನಮ್ಮ ರೆಸ್ಟೋರೆಂಟ್ ಗೆ ಬಂದಿದ್ದು ನಮಗೆ ಗೌರವ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ