ಆಮೀರ್ ಖಾನ್ ರ ಹೊಸ ಚಿತ್ರದ ಡಿಫರೆಂಟ್ ಲುಕ್ ಹೇಗಿದೆ ನೋಡಿ

ಶುಕ್ರವಾರ, 30 ಜೂನ್ 2017 (07:21 IST)
ಮುಂಬೈ:ಪ್ರತಿ ಚಿತ್ರದಲ್ಲೂ ಚಾಲೆಂಜಿಂಗ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅಮೀರ್ ಖಾನ್ ಅವರ ಹೊಸ ಚಿತ್ರದ ಹೊಸ ಲುಕ್  ಕೂಡ ಅಷ್ಟೇ ಡಿಹರೆಂಟ್ ಮತ್ತು ಇಂಟ್ರೆಸ್ಟಿಂಗ್ ಆಗಿದೆ. ತಮ್ಮ ಮುಂದಿನ ಚಿತ್ರ ಥಗ್ಸ್‌ ಆಫ್‌ ಹಿಂದೂಸ್ತಾನ್‌'ಗಾಗಿ ಆಮಿರ್ ತುಂಬಾ ವರ್ಕೌಟ್ ಮಾಡಿದ್ದು, ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
 
ಈ ಚಿಯ್ರದ ಪಾತ್ರಕ್ಕಾಗಿ ಆಮೀರ್ ಸಾಕಷ್ಟು ತೂಕವನ್ನೂ ಇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಮೂಗು, ಕಿವಿ ಚುಚ್ಚಿಸಿದ್ದು ಮೂಗುತಿ, ಓಲೆ, ರಿಂಗ್ ಗಳನ್ನು ಕೂದ ಧರಿಸಿದ್ದಾರೆ. ಆಮಿರ್‌ ಫ್ಯಾನ್‌ ಒಬ್ಬರು ಫೇಸ್‌ಬುಕ್‌ನಲ್ಲಿ ಆಮಿರ್‌ ಹೊಸ ಅವತಾರವನ್ನು ಹೊರಹಾಕಿದ್ದಾರೆ.
 
ಥಗ್ಸ್‌ ಆಫ್‌ ಹಿಂದೂಸ್ತಾನ್ ಚಿತ್ರಕ್ಕಾಗಿ ಆಮಿರ್‌ ತಮ್ಮ ಬಲ ಕಿವಿಯನ್ನು ಚುಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಮೂಗು ಕೂಡ  ಚುಚ್ಚಿಸಿಕೊಂಡಿದ್ದಾರಂತೆ. 
 

ವೆಬ್ದುನಿಯಾವನ್ನು ಓದಿ