ಅಮೀರ್ ಖಾನ್ ’ದಂಗಲ್’ ಸಿನಿಮಾಗೆ ತೆರಿಗೆ ವಿನಾಯ್ತಿ

ಬುಧವಾರ, 4 ಜನವರಿ 2017 (10:56 IST)
ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾಗೆ ದೇಶದ ರಾಜಧಾನಿ ದೆಹಲಿಯಲ್ಲಿ ತೆರಿಗೆ ವಿನಾಯ್ತಿ ಕೊಡಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಹೇಳಿದ್ದಾರೆ. ಈ ಚಿತ್ರಕ್ಕೆ ಮನರಂಜನಾ ತೆರಿಗೆಯಿಂದ ಸಿನಿಮಾಗೆ ವಿನಾಯ್ತಿ ನೀಡಲಾಗಿದೆ ಎಂದು ಆದೇಶಿಸಲಾಗಿದೆ.
 
ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸ್ಫೂರ್ತಿದಾಯಕ ಚಿತ್ರ ಇದು ಎಂದು ಸಿಸೋಡಿಯಾ ಹೇಳಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಸಹ ಮಾಡಿದ್ದು ಕ್ರೀಡಾ ಸ್ಫೂರ್ತಿಯ ಚಿತ್ರಗಳನ್ನು ಪ್ರೋತ್ಸಾಹಿಸಬೇಕಿದೆ ಎಂದಿದ್ದಾರೆ. 
 
ಇದಿಷ್ಟೇ ಅಲ್ಲದೆ ದೆಹಲಿ ನೆರೆ ರಾಜ್ಯಗಳಾದ ಹರ್ಯಾಣ, ಉತ್ತರ ಪ್ರದೇಶಗಳಲ್ಲೂ ದಂಗಲ್ ಸಿನಿಮಾಗೆ ಮನರಂಜನಾ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಅವರ ಜೀವನ ಕಥೆಯಾಧಾರಿತ ಸಿನಿಮಾ ಇದಾಗಿದ್ದು, ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರ ಈಗಾಗಲೆ ಬಾಕ್ಸ್ ಆಫೀಸಲ್ಲಿ ರೂ. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ