ಇದೀಗ 100 ರೂ. ಒಳಗಿನ ಸಿನಿಮಾ ಟಿಕೆಟ್ ದರದ ಜಿಎಸ್ ಟಿಯನ್ನು ಈ ಹಿಂದೆ ಇದ್ದ ಶೇ.12 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ 100 ರೂ. ಒಳಗೆ ಟಿಕೆಟ್ ದರವಿರುವ ಥಿಯೇಟರ್ ಗಳು ತೀರಾ ವಿರಳ. ಹೆಚ್ಚಾಗಿ ತಮಿಳುನಾಡು, ಕೇರಳ, ಆಂಧ್ರದಲ್ಲಿ ಇಂತಹ ಥಿಯೇಟರ್ ಗಳಿವೆ. ಹೀಗಾಗಿ ಆ ರಾಜ್ಯಗಳಿಗೆ ಇದರಿಂದ ಲಾಭವಾಗಲಿದೆ. ಅದನ್ನು ಹೊರತುಪಡಿಸಿದರೆ 100 ರೂ. ಗಿಂತ ಮೇಲ್ಪಟ್ಟ ಸಿನಿಮಾ ಟಿಕೆಟ್ ದರದ ಮೇಲಿನ ಶೇ.18 ರಷ್ಟು ಜಿಎಸ್ ಟಿ ದರ ಎಂದಿನಂತೇ ಮುಂದುವರಿಯಲಿದೆ. ಹೀಗಾಗಿ ಇದರ ಲಾಭ ಕರ್ನಾಟಕದ ವೀಕ್ಷಕರಿಗೆ ಆಗದು.