ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಟ್ರೋಲ್ ಮಾಡಿದವನಿಗೆ ಖಡಕ್ ಉತ್ತರ ನೀಡಿ ಆತನ ಬೆವರಿಳಿಸಿದ್ದಾರೆ.
ನಟ ಅಭಿಷೇಕ್ ಬಚ್ಚನ್ ಅವರಿಗೆ ವೈಬಿಎನ್ ಎಂಬ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ"ನಿಮ್ಮ ಜೀವನದ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಅಭಿಷೇಕ್ ಬಚ್ಚನ್ ಈಗಲೂ ತಮ್ಮ ತಂದೆ-ತಾಯಿ ಜೊತೆ ವಾಸಿಸುತ್ತಾರೆ. ಎಲ್ಲರೂ ಹೀಗೆ ಕಲಿಯಿರಿ" ಎಂದು ಟ್ರೋಲ್ ಮಾಡಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್ ಅವರು, "ನನ್ನ ತಂದೆ-ತಾಯಿ ಜೊತೆಯಿರುವುದು ನನಗೆ ಹೆಮ್ಮೆಯ ವಿಷಯ. ಅವರೂ ನನ್ನ ಜೊತೆ ಇರುವುದ್ದಕ್ಕೆ ಹೆಮ್ಮೆ ಪಡುತ್ತಾರೆ. ನೀವು ಇದೇ ರೀತಿಯಾಗಿ ಪೋಷಕರ ಜೊತೆ ಇರಿ. ನಿಮಗೂ ತೃಪ್ತಿ ಆಗುತ್ತದೆ" ಎಂದು ಖಾರವಾಗಿ ಟ್ವೀಟ್ ಮಾಡಿದಲ್ಲದೇ , ಮತ್ತೊಬ್ಬ ಅಭಿಮಾನಿ ನೀವು ಏಕೆ ಎಲ್ಲ ಟ್ರೋಲ್‍ಗಳಿಗೆ ಪ್ರತಿಕ್ರಿಯಿಸುತ್ತಿರಿ ಎಂದು ಕೇಳಿದ್ದಕ್ಕೆ, ಕೆಲವು ಬಾರಿ ಜನರಿಗೆ ಅವರ ನಿಜವಾದ ಜಾಗ ತೋರಿಸಬೇಕಾಗುತ್ತದೆ ಎಂದು ಅಭಿಷೇಕ್ ಬಚ್ಚನ್ ಖಡಕ್ ಆಗಿ ಉತ್ತರಿಸಿದ್ದಾರೆ. ಅಭಿಷೇಕ್ ಅವರ ಪ್ರತಿಕ್ರಿಯೆ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ