ಮೆಕಪ್ ಮೆನ್ ಗೆ ಸರ್ಪೈಸ್ ಆಗಿ ದುಬಾರಿ ಗಿಫ್ಟ್ ಕೊಟ್ಟ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಗುರುವಾರ, 19 ಏಪ್ರಿಲ್ 2018 (13:51 IST)
ಮುಂಬೈ : ಸಿನಿಮಾ ತಾರೆಯರು ತಮ್ಮ ಜೊತೆಗಿರುವ ಕೆಲಸಗಾರರನ್ನು ಕೀಳಾಗಿ ಕಾಣುತ್ತಾರೆ ಎಂದು ಅನೇಕರು ಹೇಳುತ್ತಾರೆ. ಆದರೆ ಈ ವಿಷಯ ಸುಳ್ಳು ಎಂಬುದನ್ನು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಬೀತುಪಡಿಸಿದ್ದಾರೆ.


ಹೌದು. ನಟಿ  ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ಮೆಕಪ್ ಮೆನ್ ಶಾನ್ ಮುತಾತಿಲ್ ಅವರಿಗೆ ದುಬಾರಿ ಬೆಲೆಯ ಬ್ರ್ಯಾಂಡ್ ನ್ಯೂ ಕಾರನ್ನು ಗಿಫ್ಟ್ ನೀಡಿದ್ದಾರೆ. ಶಾನ್ ಮುತಾತಿಲ್ ಅವರು 34 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಸರ್ಪೈಸ್ ಆಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈ ಉಡುಗೊರೆಯನ್ನು ನೀಡಿದ್ದಾರೆ. ಜಾಕ್ವೆಲಿನ್ ಸರ್ಪೈಸ್ ನೀಡುತ್ತಿರುವ ವಿಡಿಯೋವನ್ನು ಶಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ