ನಟಿ ಕಾಜೊಲ್ ಪ್ರಕಾರ ಈ ಎರಡು ಕೆಲಸ ಮಾಡಿದರೆ ನಾವು ನೆಮ್ಮದಿಯಿಂದ ಇರಬಹುದಂತೆ

ಮಂಗಳವಾರ, 26 ಜೂನ್ 2018 (19:12 IST)
ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಕಾಜೊಲ್ ಅವರು ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಏನು ಮಾಡಬೇಕು ಎಂಬುದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.


ನಟಿ ಕಾಜೊಲ್ ಅವರ ಪ್ರಕಾರ  ನಾವು ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಈ ಎರಡು ಕೆಲಸ ಮಾಡಿದರೆ  ಸಾಕಂತೆ. ಒಂದು ಮತ್ತೊಬ್ಬರ ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಇನ್ನೊಂದು ಯಾವಾಗೂ ಬ್ಯುಸಿಯಾಗಿರಬೇಕಂತೆ .
'ಹುಟ್ಟುತ್ತ ಎಲ್ಲರೂ ಸುಂದರವಾಗಿಯೇ ಇರುತ್ತಾರೆ. ನಾವು ನಮ್ಮನ್ನು ಕನ್ನಡಿಯ ಮುಂದೆ ನೋಡುವುದಕ್ಕಿಂತಲೂ ಮೊದಲಿಗೆ ನಮ್ಮನ್ನು ಈ ಸಮಾಜ ಕಂಡಿರುತ್ತದೆ. ಅವರವರ ಪಾಲಿಗೆ ಎಲ್ಲರೂ ಸುಂದರವಾಗಿಯೇ ಕಾಣುವುದರಿಂದ ಮತ್ತೊಬ್ಬರ ಸೌಂದರ್ಯದ ಬಗ್ಗೆ ನಾವು ಅಸೂಯೆಪಟ್ಟುಕೊಳ್ಳಬಾರದು. ಇದು ನಾನು ಸ್ವತಃ ಕಲಿತ ಪಾಠ.


ಮತ್ತೊಂದು ನಾವು  ಯಾವಾಗಲೂ ಬ್ಯುಸಿಯಾಗಿದ್ದರೆ ಕೆಟ್ಟ ಯೋಜನೆಗಳು ಹತ್ತಿರ ಸುಳಿಯುವುದಿಲ್ಲ. ಹಾಗಾಗಿ ಏನಾದರೂ ಕೆಲಸ ಮಾಡುತ್ತಲೇ ಇರಿ. ಏನೂ ಕೆಲಸ ಇಲ್ಲದಿದ್ದರೆ ಒಂದು ವಸ್ತುವನ್ನು ಹತ್ತು ಬಾರಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಎತ್ತಿಡು. ಒಟ್ಟಿನಲ್ಲಿ ಏನಾದರೊಂದು ಕೆಲಸ ಮಾಡುತ್ತಲೇ ಇರಿ. ಇವರೆಡರಿಂದಲೇ ನಾನು ನೆಮ್ಮದಿಯಿಂದ ಇದ್ದೇನೆ' ಎಂದು ನಟಿ ಕಾಜೊಲ್ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ