ಬೆಂಗಳೂರು: ನಾಳೆಯಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗಲಿದ್ದು, ದೊಡ್ಮನೆ ಪ್ರವೇಶಿಸಲಿರುವ 14 ಸ್ಪರ್ಧಿಗಳು ಯಾರು ಎಂಬುದು ಈಗ ಬಹುತೇಕ ಖಚಿತವಾಗಿದೆ.
ಕರುನಾಡಿನ ಪರಿಕಲ್ಪನೆಯ ಕಲರ್ ಫುಲ್ ಬಿಗ್ ಬಾಸ್ ಮನೆಯನ್ನು ಕಿಚ್ಚ ಸುದೀಪ್ ಪರಿಚಯಿಸಿದ್ದಾರೆ. ಇದರ ವಿಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಳೆ ಅಧಿಕೃತವಾಗಿ ಬಿಗ್ ಬಾಸ್ ಆರಂಭವಾಗಲಿದೆ. ಆದರೆ ಸ್ಪರ್ಧಿಗಳ ಲಿಸ್ಟ್ ಈಗಾಗಲೇ ಹೊರಬಿದ್ದಿದೆ.
ಈ ಬಾರಿ ಬಿಗ್ ಬಾಸ್ ಮನೆಗೆ ಕಾಮಿಡಿ ನಟ ಗಿಲ್ಲಿ ನಟರಾಜ್, ಕಾಕ್ರೋಚ್ ಸುಧೀರ್, ಕೊತ್ತಲವಾಡಿ ಸಿನಿಮಾ ಖ್ಯಾತಿಯ ಕಾವ್ಯಾ ಶೈವ, ಆರ್ ಜೆ ಅಮಿತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ನಿರೂಪಕಿ ಜಾಹ್ನವಿ ಕಾರ್ತಿಕ್, ಹಿರಿಯ ನಟಿ ಮಂಜು ಭಾಷಿಣಿ, ಗೀತಾ ಧಾರವಾಹಿ ಖ್ಯಾತಿಯ ಧನುಷ್, ಕನ್ನಡ ಹೋರಾಟಗಾರ್ತಿ ನಟಿ ಅಶ್ವಿನಿ ಗೌಡ, ಲಕ್ಷಣ ಧಾರವಾಹಿ ಖ್ಯಾತಿಯ ಅಭಿಷೇಕ್ ಶ್ರೀಕಾಂತ್, ಕರ್ಣ ಧಾರವಾಹಿ ಖ್ಯಾತಿಯ ಸ್ಪಂದನ ಸೋಮಣ್ಣ, ಡಾಗ್ ಸತೀಶ್, ರಾಮಚಾರಿ ಸೀರಿಯಲ್ ಖ್ಯಾತಿಯ ಮೌನ ಗುಡ್ಡೆಮನೆ, ಮನದ ಕಡಲು ಸಿನಿಮಾ ಖ್ಯಾತಿಯ ರಾಶಿಕಾ ಶೆಟ್ಟಿ ಪ್ರವೇಶಿಸುವುದು ಬಹುತೇಕ ಫೈನಲ್ ಆಗಿದೆ.
ಈ ಲಿಸ್ಟ್ ನೋಡುತ್ತಿದ್ದರೆ ಈ ಬಾರಿ ಪಕ್ಕಾ ಎಂಟರ್ ಟೈನ್ ಮೆಂಟ್ ಗ್ಯಾರಂಟಿ ಎನ್ನುವಂತಿದೆ. ನಗಿಸಲು ಸೂರಜ್, ಗಿಲ್ಲಿ ನಟ ಇದ್ದರೆ ಹುಡುಗರ ಮನಸ್ಸು ಕದಿಯಲು ಸ್ಪಂದನ, ಮೌನ, ರಾಶಿಕಾ ಹೀಗೆ ಹೀರೋಯಿನ್ ಗಳ ಪಡೆಯೇ ಇದೆ. ನಾಳೆ ಅಧಿಕೃತವಾಗಿ ಸ್ಪರ್ಧಿಗಳ ಘೋಷಣೆಯೊಂದೇ ಬಾಕಿಯಿದೆ.