ವೈವಾಹಿಕ ಜೀವನಕ್ಕಾಗಿ ಕೋರ್ಟ್ ಮೊರೆಹೋದ ನಟಿ ರಂಭಾ

ಮಂಗಳವಾರ, 25 ಅಕ್ಟೋಬರ್ 2016 (20:48 IST)
ಪಂಚಭಾಷೆ ಹಾಟ್ ನಟಿಯಾಗಿದ್ದ ಗ್ಲಾಮರ್ ಡಾಲ್ ರಂಭಾ, ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಕೌಟಂಬಿಕ ನ್ಯಾಯಾಲಯದ ಮೊರೆಹೋಗಿದ್ದಾರೆ. 
 
1990ರ ದಶಕದಲ್ಲಿ ಪಡ್ಡೆಹುಡುಗರ ಹಾಟ್ ನಟಿಯಾಗಿದ್ದ ರಂಭಾ, ಮತ್ತೆ ತಮ್ಮ ಪತಿಯೊಂದಿಗೆ ವೈವಾಹಿಕ ಜೀವನ ಮುಂದುವರಿಸಲು ನಿರ್ಧರಿಸಿದ್ದಾರೆ.
 
ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ರಂಭಾ, 2010ರಲ್ಲಿ ಕೆನಡಾದಲ್ಲಿ ನೆಲೆಸಿರುವ ಇಂದಿರನ್ ಪದ್ಮನಾಥನ್ ಅವರೊಂದಿಗೆ ವಿವಾಹವಾಗಿದ್ದರು,ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. 
 
ದಂಪತಿಗಳು ಕಳೆದ ಕೆಲ ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೀಗ, ರಂಭಾ ತಮ್ಮ ಪತಿಯೊಂದಿಗೆ ಬಾಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ, ಬಂಗಾಳಿ ಚಿತ್ರಗಳ ಸೂಪರ್‌ಸ್ಟಾರ್ ನಾಯಕರೊಂದಿಗೆ ರಂಭಾ ನಟಿಸಿದ್ದಾರೆ.
 
ನಟಿ ರಂಭಾ ಕೌಟಂಬಿಕ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಕೋರ್ಟ್ ಡಿಸೆಂಬರ್ 3 ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ಮುಂದಕ್ಕೆ ಹಾಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ