ಅಬ್ಬಾ! ಸ್ಟೇಜ್‌ ಮೇಲೆ 15 ನಿಮಿಷದ ಡ್ಯಾನ್ಸ್ ಮಾಡಲು ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ ನಟ ರಣವೀರ್ ಸಿಂಗ್‌!

ಬುಧವಾರ, 28 ಮಾರ್ಚ್ 2018 (06:15 IST)
ಮುಂಬೈ : ಐಪಿಎಲ್ 11ನೇ ಆವೃತ್ತಿಯ ಸಿದ್ದತೆ ಜೋರಾಗಿಯೇ ನಡೆಯುತ್ತಿದ್ದು, ಏಪ್ರಿಲ್ 7 ರಂದು ಐಪಿಎಲ್ ಲೀಗ್ ಗೆ ಚಾಲನೆ ನೀಡಲಿದ್ದಾರೆ. ಇದರಿಂದಾಗಿ  ಕ್ರಿಕೆಟ್ ಪ್ರಿಯರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ.


ಅಂದು ಐಪಿಎಲ್‌ ಟಿ-20 11 ನೇ ಆವೃತ್ತಿಯ ಓಪನಿಂಗ್‌ ಕಾರ್ಯಕ್ರಮವನ್ನು ಏರ್ಪಡಿಸಿದ್ದು,ಈ ಕಾರ್ಯಕ್ರಮದಲ್ಲಿ 15 ನಿಮಿಷಗಳ ಕಾಲ ಸ್ಟೇಜ್‌ ಪರ್‌ಫಾರ್ಮ ನೀಡುವಂತೆ ಬಾಲಿವುಡ್‌ ನಟ ರಣವೀರ್ ಸಿಂಗ್‌ ಅವರಲ್ಲಿ ಕೇಳಿಕೊಳ್ಳಲಾಗಿತ್ತು.
ಸೂಪರ್ ಹಿಟ್ ಸಿನಿಮಾ 'ಪದ್ಮಾವತ್‌' ಚಿತ್ರದಲ್ಲಿ ಖಿಲ್ಜಿ ಪಾತ್ರ ಮಾಡಿದ ಬಳಿಕ ರಣವೀರ್ ಸಿಂಗ್‌ ಅವರು ಹೆಸರು ಇನ್ನಷ್ಟು ಪ್ರಖ್ಯಾತಿ ಹೊಂದಿದ್ದು. ಇದರಿಂದ ಅವರ ಸಂಭಾವನೆ ಕೂಡ ಜಾಸ್ತಿಯಾಗಿದೆ. ಆದ ಕಾರಣ ಐಪಿಎಲ್‌ ಟಿ-20 11 ನೇ ಆವೃತ್ತಿಯ ಓಪನಿಂಗ್‌ ಕಾರ್ಯಕ್ರಮದಲ್ಲಿ 15 ನಿಮಿಷಗಳ ಕಾಲ ಡಾನ್ಸ್ ಮಾಡಲು ನಟ ರಣವೀರ್ ಸಿಂಗ್‌ ಅವರು ಬರೋಬರಿ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ