‘ಬ್ರಹ್ಮಾಸ್ತ್ರ’ ಚಿತ್ರದ ಶೂಟಿಂಗ್ ವೇಳೆ ಇದೇನು ಮಾಡಿಕೊಂಡರು ನಟಿ ಆಲಿಯಾ ಭಟ್!

ಬುಧವಾರ, 21 ಮಾರ್ಚ್ 2018 (06:47 IST)
ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಅವರು ನಾಯಕರಾಗಿ ನಟಿಸುತ್ತಿದ್ದ ‘ಬ್ರಹ್ಮಾಸ್ತ್ರ’ ಚಿತ್ರದ ಶೂಟಿಂಗ್ ವೇಳೆ ನಟಿ ಆಲಿಯಾ ಭಟ್ ಅವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಈ ಚಿತ್ರದಲ್ಲಿ ಆಲಿಯಾಭಟ್ ಅವರು ನಾಯಕಿಯಾಗಿ ನಟಿಸುತ್ತಿದ್ದು, ಇದರಿಂದ  ಅವರಿಗೆ ಸ್ವಲ್ಪವು ಬಿಡುವಿಲ್ಲದ ಕಾರಣ ಇತ್ತಿಚೆಗಷ್ಟೇ ನಡೆದ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು ಕೂಡ ಅವರು ಬ್ರಹ್ಮಾಸ್ತ್ರ ಸೆಟ್ ನಲ್ಲೇ ಆಚರಿಸಿಕೊಂಡಿದ್ದಾರಂತೆ.
ಈ ಚಿತ್ರದ ಶೂಟಿಂಗ್ ಬಲ್ಗೇರಿಯಾದಲ್ಲಿ  ನಡೆಯುತ್ತಿದ್ದು, ಇದೀಗ ಆಕ್ಷನ್ ದೃಶ್ಯದ ಶೂಟಿಂಗ್ ನ ವೇಳೆ ಬಿದ್ದು ಬಲಭುಜ ಹಾಗೂ ತೋಳಿಗೆ ಪೆಟ್ಟು ಮಾಡಿಕೊಂಡಿದ್ದಾರಂತೆ. ವೈದ್ಯರು ಎರಡು ವಾರಗಳ ಬೆಡ್ ರೆಸ್ಟ್ ಮಾಡಬೇಕೆಂದು ಹೇಳಿದ ಕಾರಣದಿಂದ ಚಿತ್ರದ ಶೂಟಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ