ನಟಿ ಶ್ರೀದೇವಿ ಸಾವನ್ನಪ್ಪಿದ ದುಬೈನ ಹೋಟೆಲ್ ರೂಂನಲ್ಲಿ ಇರುವುದಕ್ಕೆ ಯಾರೂ ಒಪ್ಪುತ್ತಿಲ್ಲವಂತೆ, ಇದಕ್ಕೆ ಕಾರಣವೇನು ಗೊತ್ತಾ…?

ಬುಧವಾರ, 14 ಮಾರ್ಚ್ 2018 (06:50 IST)
ಮುಂಬೈ : ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಅವರು ಮದುವೆಯ ನಿಮಿತ್ತ ದುಬೈಗೆ ತೆರಳಿ ಅಲ್ಲಿ ತಂಗಿದ್ದ ಹೋಟೆಲ್ ರೋಮ್ ಒಂದರ ಸ್ನಾನದ ಟಬ್ ನಲ್ಲಿ ಬಿದ್ದು ಸಾವನಪ್ಪಿದ ಘಟನೆ ಎಲ್ಲರಿಗೂ ತಿಳಿದೇ ಇದೆ.


ಆದರೆ ಈಗ ನಟಿ ಶ್ರೀದೇವಿ ಅವರು ತಂಗಿದ್ದ ದುಬೈನ ಫೈ ಸ್ಟಾರ್ ಹೋಟೆಲ್ ಜುಮೇರಾ ಎಮಿರೇಟ್ಸ್ ಟವರ್ಸ್ ನ 2201 ರೂಮ್ ಅನ್ನು ಬಾಡಿಗೆ ತೆಗೆದುಕೊಳ್ಳಲು ಯಾರು ಒಪ್ಪುತ್ತಿಲ್ಲವಂತೆ. ಶ್ರೀದೇವಿ ಅವರು ನಿಧನರಾದ ಸಂಗತಿಯ ಜೊತೆಗೆ ಅವರಿದ್ದ ಹೋಟೆಲ್ ನ ರೂಮ್ ನಂಬರ್ ಕೂಡ ಅಂತರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಕಾರಣ ಯಾರೊಬ್ಬರು ಆ ರೂಮ್ ಅನ್ನು ಬಾಡಿಗೆ ಪಡೆಯುವುದಿಲ್ಲವಂತೆ. ಹಾಗೇ ಆ ರೂಮ್ ನ ಒಂದು ದಿನದ ಬಾಡಿಗೆ 35 ಸಾವಿರವಂತೆ. ಆದರೆ ಈಗ ಹೋಟೆಲ್ ನವರು ಆ ರೂಮ್ ನಲ್ಲಿದ್ದ ವಸ್ತುಗಳನ್ನು ತೆಗೆದು ನವೀಕರಿಸುವ ತನಕ ತಾತ್ಕಾಲಿಕವಾಗಿ ಮುಚ್ಚಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ