ದಿಶಾ ಪಟಾನಿ ದೇಸಿ ಲುಕ್‌ಗೆ ಕ್ಲೀನ್ ಬೌಲ್ಡ್ ಆದ ರಸಿಕರು

ಬುಧವಾರ, 1 ಮಾರ್ಚ್ 2017 (15:45 IST)
’ಕುಂಗ್ ಫು ಯೋಗಾ’ ಚಿತ್ರದ ಬೆಡಗಿ ದಿಶಾ ಪಟಾನಿ ಇತ್ತೀಚೆಗೆ ಥಳುಕು ಬಳುಕಿನ ಬಟ್ಟೆಯಲ್ಲಿ ಎಲ್ಲರ ಗಮನಸೆಳೆದಿದ್ದರು. ಅದರಲ್ಲೂ ಜಿಯೋ ಫಿಲಂಫೇರ್ ಪ್ರಶಸ್ತಿ 2017ರಲ್ಲಿ ಎಲ್ಲರ ಕಣ್ಣುಕುಕ್ಕಿದ್ದರು ದಿಶಾ. ಕೇವಲ ಟೂಪೀಸ್, ಈಜುಡುಗೆ ಅಷ್ಟೇ ಅಲ್ಲ, ದೇಸಿ ಲುಕ್‌ನಲ್ಲೂ ದಿಶಾ ಸೂಪರ್ ಎಂಬುದನ್ನು ತೋರಿಸಿದ್ದಾರೆ.
 
ಮುಂಬೈನಲ್ಲಿ ನಡೆದ ಚಾರಿಟಿ ಶೋ ಕಾರ್ಯಕ್ರಮದಲ್ಲಿ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನಸೆಳೆದರು. ಸ್ವಚ್ಛ ಬಿಳಿ ಬಣ್ಣದ ಮತ್ತು ಗೋಲ್ಡನ್ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕ್ಯಾನ್ಸರ್ ಪೀಡಿತರ ಚಿಕಿತ್ಸೆಗಾಗಿ ನಿಧಿ ಸಂಗ್ರಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 
 
ಕ್ಯಾನ್ಸರ್ ಪೀಡಿತರ ಕಥೆ ಕೇಳಿ ಅವರಿಗೆ ಜೀವನದಲ್ಲಿ ಇನ್ನಷ್ಟು ಉತ್ಸಾಹ ತುಂಬಿದ್ದೇವೆ. ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ. ನೀವು ಕೊಡುವ ಅಲ್ಪಸ್ವಲ್ಪ ದೇಣಿಗೆ ಅವರ ಬಾಳಲ್ಲಿ ಬೆಳಕಾಗುತ್ತದೆ. ದಯವಿಟ್ಟು ಕೈಲಾದ ಸಹಾಯ ಮಾಡಿ ಎಂದು ಅವರು ದೇಸೀ ಲುಕ್‍ನಲ್ಲಿರುವ ಫೋಟೋಗಳನ್ನು ಎಲ್ಲರೊಂದಿಗೂ ಶೇರ್ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ