ನವಜಾತ ಶಿಶು ಜತೆ ಕರೀನಾ ಕಪೂರ್ ಫೋಟೋ ನಿಜವಲ್ಲ!

ಗುರುವಾರ, 22 ಡಿಸೆಂಬರ್ 2016 (10:20 IST)
ಬಾಲಿವುಡ್ ತಾರಾ ಜೋಡಿ ಕರೀನಾ ಕಪೂರ್, ಸೈಫ್ ಆಲಿಖಾನ್‌ ದಂಪತಿಗಳಿಗೆ ಇತ್ತೀಚೆಗೆ ಗಂಡುಮಗು ಆಗಿದ್ದು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಮಂಗಳವಾರ ಬೆಳಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕರೀನಾ ಗಂಡುಮಗುವಿಗೆ ಜನ್ಮ ನೀಡಿದರು.
 
ಮಗುಗೆ ತೈಮೂರು ಅಲಿಖಾನ್ ಪಟೌಡಿ ಎಂದು ಹೆಸರಿಟ್ಟಿದ್ದಾರೆ. ಆದರೆ ಕರೀನಾ ಮಗುವನ್ನು ಮುದ್ದಾಡುತ್ತಿರುವ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಯಿತು. ಹಾಸಿಗೆ ಮೇಲೆ ಕರೀನಾ ಮಲಗಿಕೊಂಡಿದ್ದು ಮಗುಗೆ ಮುತ್ತಿಕ್ಕುತ್ತಿರುವ ಚಿತ್ರ ಎಲ್ಲ ಕಡೆ ಹರಿದಾಡುತ್ತಿದೆ.
 
ಕರೀನಾ ಮಲಗಿರುವ ದಿಂಬಿನ ಮೇಲೆ ಬ್ರೀಚ್ ಅನ್ನೋ ಆಸ್ಪತ್ರೆ ಹೆಸರು ಕಾಣಿಸುತ್ತದೆ. ಇಷ್ಟಕ್ಕೂ ಇದು ನಿಜವಾದ ಫೋಟಾನಾ ಅಥವಾ ಫೋಟೋಶಾಪ್ ಮಾಡಿರುವುದಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಇಣುಕಿತ್ತು. ಈ ಬಗ್ಗೆ ಕರೀನಾ ಪ್ರತಿನಿಧಿ ಪ್ರತಿಯಿಸುತ್ತಾ ಈ ಫೋಟೋ ಅಸಲಿ ಅಲ್ಲ ನಕಲಿ ಎಂದಿದ್ದಾರೆ. ಈ ಹಿಂದೊಮ್ಮೆ ಇದೇ ರೀತಿಯ ಫೋಟೋ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ