ಅಶ್ಲೀಲವಾಗಿ ಕಾಮೆಂಟ್ ಮಾಡಿದವರಿಗೆ ಖಡಕ್ ಆಗಿ ಉತ್ತರಿಸಿದ ನಟಿ ಮಂದಿರಾ ಬೇಡಿ

ಮಂಗಳವಾರ, 5 ಜೂನ್ 2018 (15:49 IST)
ಮುಂಬೈ : ನಟಿ ಮಂದಿರಾ ಬೇಡಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಮ್ಮ ಫೋಟೋವೊಂದರಿಂದ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.


ಹೌದು. ನಟಿ ಮಂದಿರಾ ಬೇಡಿ ಅವರು ರಜಾದಿನಗಳನ್ನು ಕಳೆಯಲು ಗ್ರೀಸ್ ಗೆ ಹೋಗಿದ್ದು, ಅಲ್ಲಿ ಕಡಲತೀರದಲ್ಲಿ ಬಿಕಿನಿಯನ್ನು ತೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.


ಆದರೆ ಈ ಫೋಟೊ ಅವರ ಫಾಲೋವರ್ಸ್ ಗೆ ಹಿಡಿಸದ ಕಾರಣ ಆಕೆಯ ದೇಹದ ಬಗ್ಗೆಅಸಹ್ಯವಾಗಿ, ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ಆದರೆ  ನಟಿ ಮಂದಿರಾ ಬೇಡಿ ಅವರು ಮಾತ್ರ ಈ ಕಾಮೆಂಟ್ ಗಳನ್ನು ನೋಡಿ ಬೇಸರಗೊಳ್ಳದೆ ನಿಮಗೂ ಇಂತಹ ಫಿಟ್ ನೆಸ್ ಬೇಕಾದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ಟ್ರೋಲಿಗರಿಗೆ ಖಡಕ್ ಆಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ