ಮಂಗಳಸೂತ್ರದ ವಿಷಯಕ್ಕೆ ಟ್ರೋಲ್ ಗೆ ಒಳಗಾದ ನವವಧು ನಟಿ ಸೋನಂ ಕಪೂರ್

ಭಾನುವಾರ, 3 ಜೂನ್ 2018 (16:18 IST)
ಮುಂಬೈ : ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಸೋನಂ ಕಪೂರ್ ಅವರು ಇದೀಗ ಮಂಗಳಸೂತ್ರದ ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರ ಟೀಕೆಗೆ ಗುರಿಯಾಗಿದ್ದಾರೆ.


ಭಾರತೀಯರ ಸಂಸ್ಕೃತಿಯ ಪ್ರಕಾರ ಮದುವೆಯಾದ ಹೆಣ್ಣು ಮಾಂಗಲ್ಯವನ್ನು ಕೊರಳಿಗೆ ಧರಿಸಬೇಕು. ಆದರೆ ಇತ್ತೀಚೆಗೆ ವೀರೆ ದಿ ವೆಡ್ಡಿಂಗ್’ ಚಿತ್ರದ ಪ್ರಮೋಶನ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ಸೋನಂಕಪೂರ್ ಅವರು ತಮ್ಮ ಮಾಂಗಲ್ಯವನ್ನು ಬ್ರೆಸಲೇಟ್ ರೀತಿಯಲ್ಲಿ ಕೈಗೆ ಕೊಟ್ಟಿಕೊಂಡಿದ್ರು. ಸದ್ಯ ಈ ಫೋಟೋಗಳು ವೈರಲ್ ಆಗಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಿಳೆಗೆ ಕಡ್ಡಾಯವಾಗಿ ಮಾಂಗಲ್ಯ ಧರಿಸಬೇಕೆಂಬ ನಿಯಮಗಳಿಲ್ಲ. ಆದ್ರೆ ದೇಶದಲ್ಲಿ ಪತಿ-ಪತ್ನಿಯ ನಡುವಿನ ಪ್ರೀತಿಯ ಸಂಕೇತವಾಗಿ ಮಾಂಗಲ್ಯ ಧರಿಸುವುದು ಸಂಪ್ರದಾಯ. ಮಹಿಳೆಯ ಎದೆಯ ನೇರ ಭಾಗಕ್ಕೆ ಮಾಂಗಲ್ಯ ಧರಿಸಿದ್ರೆ ಪತಿ ತನ್ನ ಹೃದಯದ ಹತ್ತಿರದಲ್ಲಿಯೇ ಇದ್ದಾನೆ ಎಂದರ್ಥ. ಆದ್ರೆ ಬಾಲಿವುಡ್ ಸ್ಟಾರ್ ಗಳು ಫ್ಯಾಶನ್ ಹೆಸರಲ್ಲಿ ಭಾರತೀಯ ಸಂಸ್ಕೃತಿಯನ್ನು ಪಾಶ್ಚತ್ಯಾರ ಶೈಲಿಯೊಂದಿಗೆ ಕಲಬೆರಕೆ ಮಾಡ್ತಿದ್ದಾರೆ ಎಂದು ಟ್ವಿಟ್ಟರ್‍ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ