
	ತೆಲುಗು ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ಸುರೇಶ್ ಬಾಬು ಅವರ ಇಬ್ಬರು ಮಕ್ಕಳಲ್ಲಿ  'ಬಾಹುಬಲಿ' ಖ್ಯಾತಿಯ ರಾಣಾ ದಗ್ಗುಬಾಟಿ ಒಬ್ಬರಾದರೆ ಮತ್ತೊಬ್ಬ ಅಭಿರಾಮ್. ಈ ಅಭಿರಾಮ್ ಶ್ರೀರೆಡ್ಡಿ ಅವರನ್ನು ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ಹೈದ್ರಾಬಾದ್ ನ ಸರ್ಕಾರಿ ಸ್ಟುಡಿಯೋಗೆ ಕರೆಸಿ ದೈಹಿಕವಾಗಿ ಬಳಸಿಕೊಂಡು, ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಲೀಕ್ ಮಾಡಿದ್ದಾರೆ. 
	ನನಗೆ ಅನ್ಯಾಯ ಮಾಡಿದ್ದು, ಸುರೇಶ್ ಬಾಬು ಅವರ ಮಗ. ನನ್ನನ್ನು ಇಷ್ಟು ದಿನ ನಿಂದಿಸುತ್ತಿದ್ದವರು ಧೈರ್ಯವಿದ್ರೆ, ಸುರೇಶ್ ಬಾಬು ಕುಟುಂಬವನ್ನ ಪ್ರಶ್ನಿಸಿ. ಕೇವಲ ನನಗೆ ಮಾತ್ರವಲ್ಲ, ಈ ರೀತಿ ಹಲವು ಹೆಣ್ಣು ಮಕ್ಕಳಿಗೆ ಅಭಿರಾಮ್ ಮೋಸ ಮಾಡಿದ್ದಾನೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ, ಸ್ಟುಡಿಯೋದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ನಟಿ ಶ್ರೀರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
	ಹಾಗೇ ಇಂಡಸ್ಟ್ರಿಯಲ್ಲಿ ಇನ್ನು ಅನೇಕರು ಈ ರೀತಿ ನಟಿಯರಿಗೆ, ಯುವತಿಯರಿಗೆ ಮೋಸ ಮಾಡಿದ್ದಾರೆ. ಅವರ ಫೋಟೋಗಳು ಕೂಡ ನನ್ನ ಬಳಿ ಇದೆ. ಅದನ್ನ ಕೂಡ ಬಹಿರಂಗಪಡಿಸುತ್ತೇನೆ’ ಎಂಬುದಾಗಿ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
