ಪ್ರಭಾಸ್- ನಿಹಾರಿಕಾ ಮದುವೆಯಾಗುತ್ತಿದ್ದಾರಾ! ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿಯವರು ಹೇಳಿದ್ದೇನು?

ಮಂಗಳವಾರ, 10 ಏಪ್ರಿಲ್ 2018 (06:46 IST)
ಹೈದರಾಬಾದ್ : ಟಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಅವರ ಬಗ್ಗೆ ಈ ಹಿಂದೆ ಸಾಕಷ್ಟು ರೂಮರ್ಸ್ ಗಳು ಕೇಳಿಬಂದಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.  ಆದರೆ ಇದೀಗ ನಟ ಪ್ರಭಾಸ್ ಅವರ ಹೆಸರು ಇನ್ನೊಬ್ಬ ನಟಿಯ ಜೊತೆ ಕೇಳಿಬಂದಿದೆ.


ನಟ ಪ್ರಭಾಸ್ ಅವರು ಹಾಗೂ ನಟಿ ಅನುಷ್ಕಾ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಕೇಳಿಬಂದಿದ್ದು, ಕೊನೆಗೆ ಅವರಿಬ್ಬರು ತಾವು ಒಳ್ಳೆಯ ಸ್ನೇಹಿತರು ಎಂದು ಹೇಳುವುದರ ಮೂಲಕ ಆ ರೂಮರ್ಸ್ ಗೆ ತೆರೆ ಎಳಿದಿದ್ದರು. ಆದರೆ ಇದೀಗ ನಟ ಪ್ರಭಾಸ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರನ ಮಗಳು ನಿಹಾರಿಕಾ ಜೊತೆ ಮದುವೆಯಾಗಲಿದ್ದಾರೆ ಎಂಬ ರೂಮರ್ಸ್ ಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿತ್ತು.


ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಚಿರಂಜೀವಿ ಅವರು,’ ಇಂತಹ ಆಧಾರವಿಲ್ಲದ ವದಂತಿಗಳನ್ನು ಹಬ್ಬಿಸಬೇಡಿ. ನಿಹಾರಿಕಾ ಸದ್ಯ ಅವಳ ಚಿತ್ರಗಳ ಮೇಲೆ ಗಮನ ಹರಿಸಿದ್ದಾಳೆ. ಸದ್ಯಕ್ಕಂತು ಅವಳ ಮದುವೆ ವಿಚಾರವಿಲ್ಲ’ ಎಂದು ಹೇಳುವುದರ ಮೂಲಕ ಪ್ರಭಾಸ್ ಅವರ ಅಭಿಮಾನಿಗಳ ಸಂಭ್ರಮಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ