ನಾನಾ ಪಾಟೇಕರ್ ವಿರುದ್ಧ ಮತ್ತೊಮ್ಮೆ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ನಟಿ ತನುಶ್ರೀ ದತ್ತಾ
ಸೋಮವಾರ, 8 ಅಕ್ಟೋಬರ್ 2018 (08:19 IST)
ಮುಂಬೈ : ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದ ನಟಿ ತನುಶ್ರೀ ದತ್ತಾ ಶನಿವಾರ ನಾನಾ ಪಾಟೇಕರ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
'ಹಾರ್ನ್ ಓಕೆ ಪ್ಲೀಸ್' ಸಿನಿಮಾದ ಹಾಡು ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್, ಅಸಭ್ಯವಾಗಿ ವರ್ತಿಸಿದ್ದರು ಎಂದು ತನುಶ್ರೀ ದತ್ತಾ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅಲ್ಲದೇ ಈ ವಿಚಾರವನನ್ನು ತಕ್ಷಣವೇ ಗಣೇಶ್ ಆಚಾರ್ಯ, ರಾಕೇಶ್ ಅವರಿಗೂ ತಿಳಿಸಿದ್ದರು ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ' ಎಂದು ಹೇಳಿದ್ದರು. ಹಾಗೇ ಈ ಬಗ್ಗೆ 2008ರಲ್ಲಿ ದೂರನ್ನು ಕೂಡ ದಾಖಲಿಸಿರುವುದಾಗಿಯೂ ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಇದೀಗ ಮತ್ತೊಮ್ಮೆ ನಾನಾ ಪಾಟೇಕರ್, ನೃತ್ಯ ಸಂಯೋಜಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀರ್ ಸಿದ್ಧಿಕಿ, ನಿರ್ದೇಶಕ ರಾಕೇಶ್ ಸಾರಂಗ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.