ತಾಯಿ ದೇಹದಲ್ಲಿರುವ ತಂದೆಯ ಆತ್ಮವನ್ನು ಓಡಿಸಲು ಮಗಳು ಮಾಡಿದ್ದೇನು? ಕೇಳಿದ್ರೆ ಶಾಕ್ ಆಗ್ತೀರಾ

ಸೋಮವಾರ, 8 ಅಕ್ಟೋಬರ್ 2018 (08:16 IST)
ಮುಂಬೈ : ತಂದೆಯ ಆತ್ಮವನ್ನು ಓಡಿಸಲು  ಮುಂಬೈನ ಮಾಡೆಲ್ ಯೊಬ್ಬಳು ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಮಾಡೆಲ್ ಲಕ್ಷ್ಯ ಸಿಂಗ್ ತನ್ನ ತಾಯಿಯನ್ನೇ ಕೊಂದ ಆರೋಪಿ.  ಫ್ಯಾಷನ್ ಡಿಸೈನರ್ ಸುನಿತಾ ಸಿಂಗ್ ಮಗಳಿಂದ ಹತ್ಯೆಗೀಡಾದ ತಾಯಿ. ಶನಿವಾರ ಲಕ್ಷ್ಯ ಸಿಂಗ್ ತನ್ನ ತಾಯಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸುನಿತಾ ಅವರ ತಲೆ ಮತ್ತು ಬೆನ್ನಿನ ಮೇಲೆ ಹಲವು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಅಲ್ಲದೇ ತನಿಖೆಯ ವೇಳೆ ಆರೋಪಿ, ತಾಯಿಯನ್ನು ಹತ್ಯೆ ಮಾಡುವುದು ತನ್ನ ಉದ್ದೇಶವಾಗಿರಲಿಲ್ಲ, ಬದಲಿಗೆ ತಾಯಿಯೊಳಗೆ ಹೊಕ್ಕಿದ್ದ ತಂದೆಯ ಆತ್ಮ ಹೊರ ಹಾಕುವುದು ಉದ್ದೇಶವಾಗಿತ್ತು ಎಂದು ಹತ್ಯೆಗೆ ವಿಚಿತ್ರ ಕಾರಣ ನೀಡಿದ್ದಾರೆ. ಆದರೆ  ಘಟನೆ ನಡೆದ ವೇಳೆ ಆರೋಪಿ ಲಕ್ಷ್ಯ ಸಿಂಗ್ ಮಾದಕ ದ್ರವ್ಯ ಸೇವಿಸಿದ್ದರಂತೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ